Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಸ್ವೀಟ್ ಆರ್ಡರ್ ಮಾಡಲು ಹೋಗಿದ್ದ ಮಹಿಳೆಗೆ 2 ಲಕ್ಷ ಪಂಗನಾಮ!

ಸ್ವೀಟ್ ಆರ್ಡರ್ ಮಾಡಲು ಹೋಗಿದ್ದ ಮಹಿಳೆಗೆ 2 ಲಕ್ಷ ಪಂಗನಾಮ!
ಮುಂಬೈ , ಬುಧವಾರ, 26 ಅಕ್ಟೋಬರ್ 2022 (07:41 IST)
ಮುಂಬೈ : ದೀಪಾವಳಿ ಹಬ್ಬದ ಹಿನ್ನೆಲೆ ಆನ್ಲೈನ್ನಲ್ಲಿ ಸ್ವೀಟ್ ಆರ್ಡರ್ ಮಾಡಲು ಹೋಗಿ 49 ವರ್ಷದ ಮಹಿಳೆ 2.8 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ.

ಮುಂಬೈ ಉಪನಗರ ಅಂಧೇರಿ ನಿವಾಸಿಯಾಗಿರುವ ಪೂಜಾ ಶಾ ಅವರು, ಭಾನುವಾರ ಫುಡ್ ಅಪ್ಲಿಕೇಶನ್ನಲ್ಲಿ ಸ್ವೀಟ್ ಆರ್ಡರ್ ಮಾಡಿ ಆನ್ಲೈನ್ನಲ್ಲಿ 1,000 ರೂಪಾಯಿ ಪಾವತಿಸಲು ಪ್ರಯತ್ನಿಸಿದರು, ಆದರೆ ಹಣ ಪಾವತಿಸಲು ಸಾಧ್ಯವಾಗಲಿಲ್ಲ.

ಹಾಗಾಗಿ ಸ್ವೀಟ್ ಅಂಗಡಿಯವರ ಮೊಬೈಲ್ ನಂಬರ್ ಪಡೆದು ಸಂಪರ್ಕಿಸಿದರು. ಈ ವೇಳೆ ವ್ಯಕ್ತಿ ಪೂಜಾ ಅವರ ಕ್ರೆಡಿಟ್ ಕಾರ್ಡ್ ನಂಬರ್ ಹಾಗೂ ಓಟಿಪಿ ನಂಬರ್ ನೀಡುವಂತೆ ಕೇಳಿದ್ದಾನೆ. 

ಮಹಿಳೆ ಕೂಡ ತಮ್ಮ ಕಾರ್ಡ್ ವಿವರಗಳು ಹಾಗೂ ಓಟಿಪಿಯನ್ನು ಹಂಚಿಕೊಂಡಿದ್ದಾರೆ. ಕೆಲವೇ ಕ್ಷಣಗಳಲ್ಲಿ ಮಹಿಳೆ ಖಾತೆಯಿಂದ 2,40,310 ರೂಪಾಯಿ ಹಣ ಕಟ್ ಆಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ರಾಮ ಮಂದಿರದಲ್ಲಿ ದೇವರ ದರ್ಶನಕ್ಕೆ ಡೇಟ್ ಫಿಕ್ಸ್?