ವೈಮಾನಿಕ ಪ್ರದರ್ಶನದ ವೇಳೆ ಕಡಲ ವಿಮಾನವೊಂದು ನದಿಗೆ ಬಿದ್ದು ಇಬ್ಬರು ಸಾವನ್ನಪ್ಪಿರುವ ದಾರುಣ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದೆ. 60ಸಾವಿರಕ್ಕಿಂತಲೂ ಹೆಚ್ಚು ಜನರು ಈ ದುರಂತಕ್ಕೆ ಸಾಕ್ಷಿಯಾಗಿದ್ದಾರೆ.
ಜನರು ನೋಡ ನೋಡುತ್ತಿದ್ದಂತೆ ವಿಮಾನ ಸ್ವಾನ್ ನದಿಗೆ ಬಿದ್ದು ಅದರ ಪೈಲಟ್ ಮತ್ತು ಸಹ ಪ್ರಯಾಣಿಕ ದುರ್ಮರವನ್ನಪ್ಪಿದ್ದಾರೆ.
ಪರ್ತ ನಗರದಲ್ಲಿ ಆಸ್ಟ್ರೇಲಿಯನ್ ಡೇ ಆಚರಣೆಯ ನಿಮಿತ್ತ ಗುರುವಾರ ಸಿಡಿಮದ್ದು ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಹೀಗಾಗಿ ಸಾವಿರಾರು ಜನರು ಅಲ್ಲಿ ನೆರೆದಿದ್ದರು.
ಈ ವೇಳೆ ಏರ್‌ಶೋ ಭಾಗವಾಗಿದ್ದ 1948ರ ಗ್ರುಮ್ಮನ್ ಜಿ73 ಮಲ್ಲಾರ್ಡ್ ಫ್ಲೈಯಿಂಗ್ ಬೋಟ್ ಅಪಘಾತಕ್ಕೀಡಾಗಿದೆ. ವಿಮಾನ ನದಿಗೆ ಬಿದ್ದರು ನೆರೆದಿದ್ದವರು ಪೈಲಟ್ ಸಾಹಸ ಪ್ರದರ್ಶನ ಮಾಡುತ್ತಿದ್ದಾನೆ ಎಂದು ಭಾವಿಸಿದ್ದರು. ಆದರೆ ಬಳಿಕ ವಿಮಾನದ ಮಾಲೀಕ, ಪೈಲಟ್ 52 ವರ್ಷದ ಪೀಟರ್ ಆಂಟೊನಿ ಲಿಂಚ್ ಹಾಗೂ ಅವರ ಸಹಚರ ಇಂಡೋನೇಷ್ಯಾದ ಇಂಡಾ ಕ್ಯಾಕ್‍ರಾವತಿ(30) ಸಾವನ್ನಪ್ಪಿದ್ದಾರೆ.
ದುರ್ಘಟನೆಯ ಬಳಿಕ ಸಿಡಿಮದ್ದು ಪ್ರದರ್ಶನವನ್ನು ಸ್ಥಗಿತಗೊಳಿಸಲಾಯಿತು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ