ಬಿಸಿಯಾಗಿಡುವ ಬಾಕ್ಸ್‌ನಲ್ಲಿ ಉಪ್ಪಿಟ್ಟು ತಿಂಡಿಯನ್ನು ಸಾಗಿಸುತ್ತಿರುವಾಗ ಕಸ್ಟಮ್ಸ್ ಅಧಿಕಾರಿಗಳು ಪರಿಶೀಲನೆ ನಡೆಸಿ ಅದರಲ್ಲಿ 1.29 ಕೋಟಿ ರೂಪಾಯಿ ವಿದೇಶಿ ಕರೆನ್ಸಿ ಕಳ್ಳಸಾಗಾಣೆ ಮಾಡುತ್ತಿದ್ದ ಮಹಿಳೆ ಸೇರಿದಂತೆ ಇಬ್ಬರನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
ಕಳ್ಳಸಾಗಾಣೆದಾರರಾದ ಮಹಿಳೆ ಮತ್ತು ಸಹಪ್ರಯಾಣಿಕ ಇಬ್ಬರು ಪುಣೆಯಿಂದ ದುಬೈಗೆ ವಿಮಾನದಲ್ಲಿ ತೆರಳುತ್ತಿದ್ದರು. ಸಹಪ್ರಯಾಣಿಕ ನಿಶಾಂತ್ ದಾಖಲೆಗಳಿಂದ ಅನುಮಾನಗೊಂಡ ವಿಮಾನ ನಿಲ್ದಾಣದ ಅಧಿಕಾರಿಗಳು ಕಸ್ಟಮ್ಸ್ ಅಧಿಕಾರಿಗಳನ್ನು ಎಚ್ಚರಿಸಿ ಮತ್ತೊಮ್ಮೆ ಪ್ರಯಾಣಿಕನ ಬ್ಯಾಗ್‌ಗಳನ್ನು ಪರಿಶೀಲಿಸುವಂತೆ ಆದೇಶ ನೀಡಿದ್ದಾರೆ.
ಸಹಪ್ರಯಾಣಿಕನ ಬ್ಯಾಗ್ ಮತ್ತೊಮ್ಮೆ ಪರಿಶೀಲನೆ ನಡೆಸಿದಾಗ ಬಿಸಿಯಾಗಿಡುವ ಬಾಕ್ಸ್‌ನಲ್ಲಿ ಉಪಮಾ ಪತ್ತೆಯಾಗಿದೆ. ಉಪಮಾ ಬಾಕ್ಸ್‌ನ ಭಾರ ಸಾಮಾನ್ಯವಾಗಿರದೆ ಹೆಚ್ಚು ಭಾರವಿರುವಂತೆ ಕಂಡು ಬಂದಿದೆ. ಸಂಪೂರ್ಣ ಪರಿಶೀಲನೆ ನಡೆಸಿದಾಗ ಉಪಮಾ ಒಳಗೆ ಪ್ಲ್ಯಾಸ್ಟಿಕ್ ಬ್ಯಾಗ್‌ನಲ್ಲಿ 86,600 ಅಮೆರಿಕನ್ ಡಾಲರ್ ಮತ್ತು 15000 ಯುರೋ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದರಿಂದ ಅನುಮಾನಗೊಂಡ ಅಧಿಕಾರಿಗಳು ಸಹಪ್ರಯಾಣಿಕನ ಜೊತೆಯಿದ್ದ ಎಚ್.ರಂಗ್ಲಾನಿ ಎನ್ನುವ ಮಹಿಳಾ ಪ್ರಯಾಣಿಕಳ ಬ್ಯಾಗ್ ಕೂಡಾ ತಪಾಸಣೆ ನಡೆಸಿದ್ದಾರೆ. ಆಕೆಯ ಬ್ಯಾಗ್‌ನಲ್ಲೂ ಉಪಮಾ ಬಾಕ್ಸ್ ಪತ್ತೆಯಾಗಿದೆ. ಉಪಮಾ ಬಾಕ್ಸ್‌ನಲ್ಲಿ 86,200 ಅಮೆರಿಕ ಡಾಲರ್, 15 ಸಾವಿರ ಯುರೋ ಹಣ ಪತ್ತೆಯಾಗಿದೆ
ಕಸ್ಟಮ್ಸ್ ಅಧಿಕಾರಿಗಳು ಇಬ್ಬರು ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡು ಎರಡೂ ಪ್ರಕರಣಗಳ ಬಗ್ಗೆ ತನಿಖೆ ಮುಂದುವರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.