Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ನರಮಾಂಸ ಭಕ್ಷಣೆ; ನೀವೆಂದೂ ಕೇಳರಿಯದ ಬೀಭತ್ಸ ಕೃತ್ಯವಿದು!

ನರಮಾಂಸ ಭಕ್ಷಣೆ; ನೀವೆಂದೂ ಕೇಳರಿಯದ ಬೀಭತ್ಸ ಕೃತ್ಯವಿದು!
ಲೂಧಿಯಾನ , ಶನಿವಾರ, 21 ಜನವರಿ 2017 (11:54 IST)
ಇದು ನೀವೆಂದೂ ಕೇಳರಿಯದಂತಹ ರಾಕ್ಷಸೀ ಕೃತ್ಯ. ಮಕ್ಕಳಲ್ಲಿ ಅಪರಾಧಿಕ ಪ್ರವೃತ್ತಿ ಎಷ್ಟು ಪೈಶಾಚಿಕವಾಗಿ ಬೆಳೆದಿದೆ ಎಂಬುದಕ್ಕೆ ಇದಕ್ಕಿಂತ ಕರಾಳ ಉದಾಹರಣೆ ಸಿಗಲಾರದು. 16 ವರ್ಷದ ಹುಡುಗನೊಬ್ಬ 9 ವರ್ಷದ ಬಾಲಕನನ್ನು ಕೊಂದು, 6 ಭಾಗಗಳಾಗಿ ಕತ್ತರಿಸಿ, ಮಾಂಸ ತಿಂದು, ರಕ್ತ ಕುಡಿದ ಘೋರ ಘಟನೆ ಪಂಜಾಬಿನ ಲೂಧಿಯಾನದಲ್ಲಿ ಬೆಳಕಿಗೆ ಬಂದಿದೆ. 

ಮೃತನನ್ನು ದೀಪು ಕುಮಾರ್ ಎಂದು ಗುರುತಿಸಲಾಗಿದ್ದು ಸೋಮವಾರದಿಂದ ನಾಪತ್ತೆಯಾಗಿದ್ದ ಆತನ ಮೃತ ದೇಹ ತಲೆ ಕತ್ತರಿಸಿದ ಸ್ಥಿತಿಯಲ್ಲಿ ದುಗ್ರಿ ಪ್ರದೇಶದಲ್ಲಿ ಮಂಗಳವಾರ ಕಂಡು ಬಂದಿತ್ತು. 
 
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆ ಪ್ರದೇಶದಲ್ಲಿನ ಕಟ್ಟಡವೊಂದರಲ್ಲಿನ ಸಿಸಿ ಕ್ಯಾಮರಾವನ್ನು ಪರಿಶೀಲಿಸಿದಾಗ ದೀಪು, ಹದಿಹರೆಯದ ಹುಡುಗನ ಜತೆ ಇರುವುದು ಕಾಣಿಸಿತ್ತು. ಇದರ ಆಧಾರದ ಮೇಲೆ ಆರೋಪಿಯನ್ನು ಬಂಧಿಸಿದಾಗ ಆತ ಕೊಲೆಗೈದಿದ್ದನ್ನು ಮತ್ತು ಮಾಂಸವನ್ನು ತಿಂದಿದ್ದನ್ನು ಒಪ್ಪಿಕೊಂಡಿದ್ದಾನೆ. ಆರೋಪಿ 8ನೇ ತರಗತಿ ವಿದ್ಯಾರ್ಥಿಯಾಗಿದ್ದಾನೆ. ಇಬ್ಬರು ಕೂಡ ಅಲೆಮಾರಿ ಕಾರ್ಮಿಕರ ಮಕ್ಕಳಾಗಿದ್ದು ನೆರೆಹೊರೆಯವರಾಗಿದ್ದರು. ನಿರುಮ್ಮಳನಾಗಿ ಆರೋಪಿ ಎಲ್ಲವನ್ನು ಹೇಳುತ್ತಿದ್ದರೆ ಪೊಲೀಸರೇ ಬೆವೆತು ಹೋಗಿದ್ದಾರೆ.
 
ಆರೋಪಿ ಬಿಚ್ಚಿಟ್ಟ ಭಯಾನಕ ಸತ್ಯ: ಸೋಮವಾರ ಮಧ್ಯಾಹ್ನ 1.40ರ ಸುಮಾರಿಗೆ ಗಾಳಿಪಟ ಹಾರಿಸೋಣ ಎಂದು ದೀಪುವನ್ನು ಕಳೆದೊಯ್ದ ಬಾಲಕ, ಉಸಿರುಗಟ್ಟಿಸಿ ಆತನನ್ನು ಕೊಂದಿದ್ದಾನೆ. ಬಳಿಕ ಆತನ ಬಟ್ಟೆಗಳ್ನು ಕಳಚಿ  ತೋಟಗಾರಿಕೆಗೆ ಬಳಸುವ ಚೂಪಾದ ಆಯುಧದಿಂದ ದೇಹವನ್ನು ಆರು ಭಾಗ ಮಾಡಿದ್ದಾನೆ. ಹೃದಯವನ್ನು ಕಿತ್ತಿದ್ದಾನೆ. ಸ್ವಲ್ಪ ಮಾಂಸವನ್ನು ತಿಂದು ರಕ್ತವನ್ನು ಕುಡಿದಿದ್ದಾನೆ. 
 
ನಂತರ ಗೋಣಿ ಚೀಲದಲ್ಲಿ ದೇಹದ ಭಾಗಗಳನ್ನು ತುಂಬಿ ಸೈಕಲ್‍ನಲ್ಲಿ ತೆಗೆದುಕೊಂಡು ಹೋಗಿ ಎಸೆದು ಬಂದಿದ್ದಾನೆ. ಕತ್ತರಿಸಿದ ಹೃದಯವನ್ನು ಶಾಲೆಯ ಆವರಣದಲ್ಲಿ ಎಸದಿದ್ದಾನೆ.  ನೀರಿನ ಟ್ಯಾಂಕ್ ಕೆಳಗೆ ಬಿದ್ದಿದ್ದ ಹೃದಯವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಶಾಲೆ ಹಾಗೂ ಶಿಕ್ಷಕರ ಮೇಲೆ ದ್ವೇಷ ಹೊಂದಿದ್ದ ಆರೋಪಿ ಶಾಲೆಗೆ ಕೆಟ್ಟ ಹೆಸರು ತರಬೇಕೆಂದು ಈ ರೀತಿ ಮಾಡಿದ್ದೇನೆ ಎಂದಿದ್ದಾನೆ. 
 
ದೀಪುವನ್ನು ಬಾಲಕ ಯಾವುದೇ ಆತಂಕ, ಭಯವಿಲ್ಲದೇ ಸಹಜವಾಗಿ ಮನೆಗೆ ಮರಳಿದ್ದಾನೆ. ಆ ಸಂದರ್ಭದಲ್ಲಿ ಆತನ ತಾಯಿ ಮನೆಯಲ್ಲಿರಲಿಲ್ಲವಾದ್ದರಿಂದ ಅಣ್ಣನ ಜತೆ ಸೇರಿ ತಂದೆಗೆ ಅಡುಗೆ ಮಾಡಿಟ್ಟಿದ್ದಾನೆ. 
 
ಇದು ನರಭಕ್ಷಣೆಯ ಪ್ರಕರಣ, ಆರೋಪಿಗೆ ನರಮಾಂಸ ತಿನ್ನಬೇಕೆನ್ನುವ ಹಪಹಪಿ ಇತ್ತು. ನನಗೆ ಸದಾ ಕೋಳಿಮಾಂಸವನ್ನು ಹಸಿಯಾಗಿಯೇ ತಿನ್ನಬೇಕು, ತನ್ನದೇ ತೊಡೆ ಮಾಂಸವನ್ನು ತಿನ್ನಬೇಕು ಎನ್ನಿಸುತ್ತಿತ್ತು, ಎಂದಾತ ವಿಚಾರಣೆ ಸಂದರ್ಭದಲ್ಲಿ ಬಾಯ್ಬಿಟ್ಟಿದ್ದಾನೆ ಎಂದು ಪೊಲೀಸ್ ಉಪ ಆಯುಕ್ತ ಭೂಪಿಂದರ್ ಸಿಂಗ್ ಹೇಳಿದ್ದಾರೆ.  
 
ಬಾಲಕನನ್ನು ವೈದ್ಯಕೀಯ ಮತ್ತು ಮನೋವೈಜ್ಞಾನಿಕ ಪರೀಕ್ಷೆಗೊಳಪಡಿಸಲಾಗಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಪಾಕಿಸ್ತಾನದಲ್ಲಿ ಬಾಂಬ್ ಸ್ಟೋಟಕ್ಕೆ 18 ಬಲಿ