15 ವರ್ಷದ ಬಾಲಕಿಯನ್ನು ಬೆದರಿಸಿ ನಾಲ್ವರು 6 ತಿಂಗಳುಗಳ ಕಾಲ ಕಾಮ ತೃಷೆ ತೀರಿಸಿಕೊಂಡ ಹೇಯ ಘಟನೆ
ಆಗ್ನೇಯ ದೆಹಲಿಯ ಜಾಮಿಯಾನಗರದಲ್ಲಿ ನಡೆದಿದೆ.
ನಾಲ್ವರು ಆರೋಪಿಗಳಲ್ಲಿ ಒಬ್ಬ ಖಾಸಗಿ ಬಿಲ್ಡರ್ ಆಗಿದ್ದು ಸಾಹೀನ್ ಬಾಗ್ ನಿವಾಸಿಯಾಗಿದ್ದಾನೆ. ವಿವಾಹಿತನಾಗಿರುವ ಆತ ನಾಲ್ಕು ಮಕ್ಕಳ ತಂದೆಯಾಗಿದ್ದು ತನ್ನ ಫ್ಲಾಟ್ನಲ್ಲಿಯೇ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದಾನೆ.
ಪೀಡಿತೆ 9ನೇ ತರಗತಿ ವಿದ್ಯಾರ್ಥಿಯಾಗಿದ್ದಾಳೆ. ತನ್ನ ಗೆಳತಿಯಿಂದಾಗಿ ಆಕೆಗೆ ಬಿಲ್ಡರ್ ಪರಿಚಯವಾಗಿತ್ತು. ಆಕೆಯನ್ನು ನಗರದಲ್ಲಿ ವಿವಿಧೆಡೆಗಳಲ್ಲಿದ್ದ ತನ್ನ ಫ್ಲಾಟ್ಗೆ ಕರೆದೊಯ್ದು ಆತ ಅತ್ಯಾಚಾರವೆಸಗುತ್ತಿದ್ದ. ಆಕೆಯ ಎಮ್ಎಮ್ಎಸ್ ತಯಾರಿಸಿ ಇದನ್ನು ಸಾಮಾಜಿಕ ಜಾಲತಾಣದಲ್ಲಿ ಬಿತ್ತರಿಸುವುದಾಗಿ ಹೇಳಿ ಬೆದರಿಕೆ ಹಾಕಿ ಆಕೆಯನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದ. ಆತನಲ್ಲದೇ ಮತ್ತೆ ಮೂವರು ಸಹ ಆಕೆಯನ್ನು ದೈಹಿಕವಾಗಿ ಬಳಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಆತನ ಕೀಚಕ ಕೃತ್ಯದಿಂದ 3 ತಿಂಗಳ ಗರ್ಭಿಣಿಯಾದ ಬಾಲಕಿ ಇತ್ತೀಚಿಗೆ ತನ್ನ ಜತೆ ನಡೆಯುತ್ತಿದ್ದ ಕರಾಳ ಕೃತ್ಯವನ್ನು ತಾಯಿಯ ಬಳಿ ಹೇಳಿಕೊಂಡಿದ್ದಾಳೆ. ಸ್ಥಳೀಯ ಸ್ವಯಂ ಸೇವಾ ಸಂಸ್ಥೆಯೊಂದರ ನೆರವಿನಿಂದ ಪೊಲೀಸ್ ಠಾಣೆ ಮೆಟ್ಟಿಲೇರಿದ ಆಕೆಯ ತಾಯಿ ನ್ಯಾಯಕ್ಕಾಗಿ ಮೊರೆ ಇಟ್ಟಿದ್ದಾಳೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.