Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಸಾಲಮನ್ನಾಕ್ಕೆ 14 ಷರತ್ತುಗಳನ್ನ ವಿಧಿಸಿದ ರಾಜ್ಯ ಸರ್ಕಾರ

ಸಾಲಮನ್ನಾಕ್ಕೆ 14 ಷರತ್ತುಗಳನ್ನ ವಿಧಿಸಿದ ರಾಜ್ಯ ಸರ್ಕಾರ
ಬೆಂಗಳೂರು , ಶನಿವಾರ, 24 ಜೂನ್ 2017 (15:20 IST)
ಅಧಿವೇಶನದ ಕೊನೆಯ ದಿನ ರೈತರಿಗೆ ಬಂಪರ್ ಗಿಫ್ಟ್ ಕೊಟ್ಟಿದ್ದ ಸಿಎಂ ಸಿದ್ದರಾಮಯ್ಯ, ಸಹಕಾರಿ ಬ್ಯಾಂಕ್`ಗಳಲ್ಲಿ ಪಡೆದಿರುವ 50 ಸಾವಿರ ರೂಪಾಯಿವರೆಗಿನ ಸಾಲಮನ್ನಾ ಘೋಷಿಸಿದ್ದರು. ಇದೀಗ, ಸಾಲಮನ್ನಾದ ಅಧಿಕೃತ ಆದೇಶ ಹೊರಬಿದ್ದಿದ್ದು, ಇದರಲ್ಲಿ 14 ಷರತ್ತುಗಳನ್ನ ವಿಧಿಸಲಾಗಿದೆ.

-ಅಲ್ಪಾವಧಿ, ಬೆಳೆಸಾಲ ಮಾತ್ರ ಮನ್ನಾ
- ಮಧ್ಯಮಾವಧಿ, ಧೀರ್ಘಾವಧಿ, ಪಶುಭಾಗ್ಯ ಸಾಲಕ್ಕೆ ಅನ್ವಯವಾಗುವುದಿಲ್ಲ
- ಸಹಕಾರಿ ಸಂಸ್ಥೆ, ಸಹಕಾರಿ ಬ್ಯಾಂಕ್, ಪಿಕಾರ್ಡ್ ಬ್ಯಾಂಕ್, ಪತ್ತಿನ ಸಹಕಾರ ಸಂಘಗಳಲ್ಲಿ ಪಡೆದಿರುವ 50,000 ರೂ.ವರೆಗಿನ ಸಾಲಮನ್ನಾ ಆಗಲಿದೆ.
- ಒಬ್ಬ ರೈತ ಎರಡೆರಡು ಸಹಕಾರಿ ಬ್ಯಾಂಕ್`ಗಳಲ್ಲಿ ಸಾಲ ಪಡೆದಿದ್ದರೆ ಒಂದು ಕೆಡ ಮಾತ್ರ ಮನ್ನಾ ಆಗಲಿದೆ.
-50 ಸಾವಿರಕ್ಕಿಂತ ಹೆಚ್ಚುವರಿ ಸಾಲ ಪಡೆದಿರುವವರು ಉಳಿದ ಹಣವನ್ನ ಡಿಸೆಂಬರ್ 31ರ ಒಳಗೆ ಪಾವತಿ ಮಾಡಿದರೆ ಮಾತ್ರ 50 ಸಾವಿರ ಸಾಲಮನ್ನಾ ಆಗಲಿದೆ.
-ರೈತ ಈಗಾಗಲೇ ಸಹಕಾರಿ ಬ್ಯಾಂಕ್`ಗಳಿಗೆ ಸಾಲ ಮರುಪಾವತಿ ಮಾಡಿದ್ದರೆ ಆ ಹಣವನ್ನ ವಾಪಸ್ ನೀಡಲಾಗುತ್ತದೆ.
-ಜೂನ್ 20ರವರೆಗಿನ ಸಹಕಾರಿ ಬ್ಯಾಂಕ್`ಗಳಲ್ಲಿ ಪಡೆದಿರುವ ಸಾಲ ಮನ್ನಾ ಆಗಲಿದೆ

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಎಂಇಎಸ್ ಸದಸ್ಯರು ನಾಡಗೀತೆಗೆ ಗೌರವ ಸಲ್ಲಿಸುವಂತೆ ಮಾಡಿದ ಜಿಲ್ಲಾಧಿಕಾರಿ