Webdunia - Bharat's app for daily news and videos

Install App

ಬರ್ತ್ ಡೇ ಕೇಕ್ ಎಂದು ತಿಂದ ಬಾಲಕಿಗೆ ಹೀಗಾಗೋದಾ!

Krishnaveni K
ಭಾನುವಾರ, 31 ಮಾರ್ಚ್ 2024 (10:20 IST)
ಪಂಜಾಬ್: ಬರ್ತ್ ಡೇಗೆ ಕೇಕ್ ಕಟ್ ಮಾಡಿ ತಿಂದಿದ್ದ ಬಾಲಕಿಗೆ ಅದು ತನ್ನ ಜೀವಕ್ಕೇ ಎರವಾಗಬಹುದು ಎಂದು ಗೊತ್ತೇ ಇರಲಿಲ್ಲ. ಇಂತಹದ್ದೊಂದು ಧಾರುಣ ಘಟನೆ ಪಂಜಾಬ್ ನ ಪಟಿಯಾಲದಲ್ಲಿ ನಡೆದಿದೆ.

10 ವರ್ಷದ ಬಾಲಕಿಗೆ ಆಕೆಯ ಹುಟ್ಟುಹಬ್ಬಕ್ಕೆಂದು ಕೇಕ್ ಆರ್ಡರ್ ಮಾಡಲಾಗಿತ್ತು. ಅದರಂತೆ ಕೇಕ್ ತಂದು ತಿಂದಿದ್ದ ಬಾಲಕಿ ತೀವ್ರ ಅಸ್ವಸ್ಥಳಾಗಿ ಸಾವನ್ನಪ್ಪಿದ್ದಾಳೆ. ಇದೀಗ ಪಟಿಯಾಲ ಪೊಲೀಸರು ಕೇಕ್ ನೀಡಿದ್ದ ಅಂಗಡಿ ಮಾಲಿಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬಾಲಕಿ ತನ್ನ ಕುಟುಂಬಸ್ಥರೊಂದಿಗೆ ಕೇಕ್ ಕಟ್ ಮಾಡಿ ಸವಿಯುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾ ಎಕ್ಸ್ ನಲ್ಲಿ ವೈರಲ್ ಆಗಿದೆ. ಈ ಸಂತೋಷದ ಕ್ಷಣ ಕೆಲವೇ ಸಮಯ ಮಾತ್ರ ಉಳಿದಿತ್ತು. ಇದಾಗಿ ಕೆಲವೇ ಕ್ಷಣಗಳಲ್ಲಿ ಕೇಕ್ ತಿಂದ ಎಲ್ಲರ ಆರೋಗ್ಯ ಏರುಪೇರಾಗಿದೆ.

ಮನೆಯವರೆಲ್ಲಾ ವಾಂತಿ ಮಾಡಲಾರಂಭಿಇದ್ದಾರೆ. ಸುಸ್ತಾಗಿದ್ದ ಬಾಲಕಿಗೆ ರಾತ್ರಿ ಮಲಗಲು ಹೋದವಳು ಎದ್ದಿರಲಿಲ್ಲ. ಉಳಿದ ಕುಟುಂಬಸ್ಥರು ಇದೀಗ ಚೇತರಿಸಿಕೊಂಡಿದ್ದಾರೆ. ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸುವಾಗಲೇ ಆಕೆ ಸಾವನ್ನಪ್ಪಿರುವುದಾಗಿ ವೈದ್ಯರು ಖಚಿತಪಡಿಸಿದ್ದಾರೆ. ಘಟನೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments