ಮುಂಬೈ (ಆ. 28): ಪಬ್ಜಿ ಗೇಮ್ ಆಟದ ಗೀಳು ಯಾವ ಮಟ್ಟಿಗೆ ಮಕ್ಕಳನ್ನು ಆವರಿಸುತ್ತದೆ ಎಂಬುದನ್ನು ಈಗಾಗಲೇ ಅನೇಕ ಪ್ರಕರಣಗಳಲ್ಲಿ ದಾಖಲಾಗಿದೆ. ಇದೇ ರೀತಿ ಈ ಪಬ್ಜಿ ಆಟವಾಡಲು ಮುಂಬೈನ ಅಂಧೇರಿಯ 16 ವರ್ಷದ ಯುವಕ ತನ್ನ ಪೋಷಕರ ಬ್ಯಾಂಕ್ನಿಂದ ಬರೋಬ್ಬರಿ 10 ಲಕ್ಷ ರೂಪಾಯಿ ಹಣವನ್ನು ತೆಗೆದುಕೊಂಡಿದ್ದಾರೆ. ಪಬ್ಜಿ ಗೇಮ್ಗಾಗಿ ಐಡಿ ಪಡೆಯಲು ಈತ ಇಷ್ಟೊಂದು ಮೊತ್ತದ ಹಣವನ್ನು ಪಡೆದಿದ್ದಾನೆ.
ಇದಾದ ಬಳಿಕ ಬೆದರಿದ ಬಾಲಕ ಮನೆಬಿಟ್ಟು ಓಡಿ ಹೋಗಿದ್ದಾನೆ. ಈ ವೇಳೆ ಪತ್ರವೊಂದನ್ನು ಬರೆದು ಮನೆತೊರೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಪೋಷಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಬಳಿಕ ಬಾಲಕನ ಪತ್ತೆಗೆ ಅಪರಾಧ ವಿಭಾಗದ ವಿಶೇಷ ತಂಡ ರಚಿಸಲಾಗಿತ್ತು. ಆತನನ್ನು ಪತ್ತೆ ಮಾಡಿದ ತಂಡ ಹೆತ್ತವರೊಂದಿಗೆ ಆತನನ್ನು ಸೇರಿಸಲು ಯಶಸ್ವಿಯಾಗಿದ್ದಾರೆ. ಮನೆಗೆ ಬರುವುದಿಲ್ಲ ಎಂದು ಪತ್ರ ಬರೆದಿದ್ದ ಬಾಲಕ
ಘಟನೆ ಕುರಿತು ಮಾತನಾಡಿದ ಮುಂಬೈನ ಅಂಧೇರಿಯ ಅಪರಾಧ ವಿಭಾಗದ ಪೊಲೀಸರು, ಬುಧವಾರ ಬಾಲಕ ಮನೆಯಲ್ಲಿ ಪತ್ರವನ್ನು ಬರೆದು, ನಾನು ಮನೆ ಬಿಟ್ಟು ಹೋಗುತ್ತಿದ್ದು, ಮತ್ತೆ ಎಂದು ಬರುವುದಿಲ್ಲ ಎಂದು ಉಲ್ಲೇಖಿಸಿದ್ದ. ತಕ್ಷಣಕ್ಕೆ ಪೋಷಕರು ದೂರು ನೀಡಿದ್ದು, ಆತನ ಕುರಿತ ಮಾಹಿತಿ ಪಡೆದ ಬಳಿಕ ಆತನ ಪತ್ತೆಗೆ ಮುಂದಾಗಲಾಯಿತು. ಆತನ ಸ್ನೇಹಿತರು, ಸಹಪಾಠಿಗಳನ್ನು ವಿಚಾರಣೆ ನಡೆಸಿದೆವು. ಇದಾದ ಬಳಿಕ ಪೋಷಕರು ಪಬ್ಜಿ ಗೇಮ್ಗಾಗಿ ಬಾಲಕ 10 ಲಕ್ಷ ಹಣವನ್ನು ತಮ್ಮ ಖಾತೆಯಿಂದ ಬಾಲಕ ಹಣ ಡ್ರಾ ಮಾಡಿಕೊಂಡಿರುವುದನ್ನು ತಿಳಿಸಿದ್ದಾರೆ.
ಆತ ಮನೆ ಬಿಟ್ಟು ಹೋದ ತಕ್ಷಣದಿಂದ ಸ್ಥಳೀಯ ಸಿಸಿಟಿವಿ ಮುಖಾಂತರ ಆತನ ಚಲನವಲನ ಪತ್ತೆಗೆ ಮುಂದಾಗಲಾಯಿತು. ಬಳಿಕ ಆತನ ಅಂಧೇರಿಯ ಮಹಾಕಾಳಿ ಗುಹೆ ಬಳಿ ಪತ್ತೆಯಾಗಿದ್ದಾನೆ. ಆತನನ್ನು ಕುಟುಂಬದೊಂದಿಗೆ ಸೇರಿಸಿದ್ದು, ಸಮಾಲೋಚನೆ ನಡೆಸಿದ್ದೇವೆ. ಪೋಷಕರಿಗೂ ಸಮಾಲೋಚನೆ ನಡೆಸಲಾಗಿದೆ ಎಂದರು. ದಕ್ಷಿಣ ಕನ್ನಡದಲ್ಲಿ ಆಟಕ್ಕಾಗಿ ತಲೆ ಕೂದಲಿಗೆ ಕತ್ತರಿ ಹಾಕಿದ್ದ ಬಾಲಕ
ಕಳೆದ ಎರಡು ತಿಂಗಳ ಹಿಂದೆ ಇದೇ ಪಬ್ ಜಿ ಹುಚ್ಚಿಗೆ ದಕ್ಷಿಣಕನ್ನಡ ಜಿಲ್ಲೆಯ ಉಳ್ಳಾಲದಲ್ಲಿ ಪಬ್ ಜೀ ಗೇಮ್ ನಿಂದಾಗಿ ಬಾಲಕನೋರ್ವನ ಕೊಲೆ ನಡೆದ ಘಟನೆ ಮಾಸುವ ಮೊದಲೇ ಪಬ್ ಜೀ ಗೇಮ್ ಆಧಾರಿತ ಇಂಥಹುದೇ ಒಂದು ಘಟನೆ ಪುತ್ತೂರು ತಾಲೂಕಿನ ಉಪ್ಪಿನಂಗಡಿ ಎಂಬಲ್ಲಿ ನಡೆದಿದೆ. ಉಪ್ಪಿನಂಗಡಿಯ ಪ್ರೌಢ ಶಾಲಾ ವಿದ್ಯಾರ್ಥಿಯೋರ್ವ ಪಬ್ ಜೀ ಪ್ರೀ ಪೈಯರ್ ಗೇಮ್ ಆಡಿಕೊಂಡು ಕಲೆಕೂದಲನ್ನು ಕತ್ತರಿಸಿಕೊಂಡ ಘಟನೆ ವರದಿಯಾಗಿತ್ತು. ಪಬ್ ಜೀ ಗೇಮ್ ಹೊಸ ಮಾದರಿಯಲ್ಲಿ ಹದಿಹರೆಯದ ವಿದ್ಯಾರ್ಥಿಗಳನ್ನು ಸೆಳೆಯುತ್ತಿದ್ದ, ಹೆಚ್ಚಾಗಿ ಮಕ್ಕಳೇ ಇದಕ್ಕೆ ಬಲಪಶುವಾಗುತ್ತಿರುವ ಪ್ರಕರಣ ಆಗ್ಗಿಂದ ಆಗೆ ವರದಿ ಆಗುತ್ತಲೇ ಇರುತ್ತದೆ.