ಕೆಲವೊಮ್ಮೆ ಮಾತಿನ ಭರದಲ್ಲಿ ಹೇಳಿರುವ ಮಾತುಗಳು ಬಹುದೊಡ್ಡ ವಿವಾದಕ್ಕೆ ಕಾರಣವಾಗುತ್ತವೆ ಎಂಬುದಕ್ಕೆ ಸ್ಪಷ್ಟ ಉದಾಹರಣೆ ಇದು. ಹೆಣ್ಣಿನ ಮಾನಕ್ಕಿಂತ, ಓಟಿನ ಮಾನ ದೊಡ್ಡದು( ಬೇಟಿ ಕಿ ಇಜ್ಜತ್ ಸೆ, ವೋಟ್ ಕಿ ಇಜ್ಜತ್ ಬಡಿ ಹೈ)ಎಂದು ಹೇಳುವ ಮೂಲಕ ಜೆಡಿಯು ಮುಖಂಡ, ರಾಜ್ಯಸಭಾ ಸದಸ್ಯ ಶರದ್ ಯಾದವ್ ಬಹುದೊಡ್ಡ ವಿವಾದಕ್ಕೆ ಕಾರಣರಾಗಿದ್ದಾರೆ.
ಪಾಟ್ಣಾದಲ್ಲಿ ಮತದಾನದ ಪಾವಿತ್ರ್ಯತೆ ಬಗ್ಗೆ ಮಾತನಾಡುತ್ತಿದ್ದ ಯಾದವ್, ಮಗಳ ಮಾನ ಹೋದರೆ, ಊರಿನ ಮಾನ ಹೋಗುತ್ತದೆ, 1 ಬಾರಿ ಮತ ಮಾರಾಟವಾದರೆ ಸಂಪೂರ್ಣ ದೇಶದ ಮಾನ ಹರಾಜಾಗುತ್ತದೆ, ಎಂದು ಹೇಳಿದ್ದಾರೆ.
ಘನತೆ ಗೌರವ ಕೊಡಬೇಕಿದ್ದ ಜನಪ್ರತಿನಿಧಿ, ದೇಶದ ನಾಯಕರೊಬ್ಬರು ಹೆಣ್ಣಿನ ಮಾನ ಹೋದ್ರು ಹೋಗಲಿ ಎಂದು ಹೊಣೆಗೇಡಿತನದ ಹೇಳಿಕೆ ನೀಡಿರುವುದೀಗ ಟೀಕೆಗೆ ಕಾರಣವಾಗಿದೆ.
ಈ ಹಿಂದೆ ಸಂಸತ್ತಿನಲ್ಲಿ ಹೆಣ್ಣಿನ ಬಗ್ಗೆ ಇದೇ ರೀತಿಯ ಹೇಳಿಕೆಯನ್ನು ನೀಡಿದ್ದ ಯಾದವ್, ಬಳಿಕ ತಮ್ಮ ಮಾತಿಗೆ ವಿಷಾದವನ್ನು ವ್ಯಕ್ತ ಪಡಿಸಿದ್ದರು.
ಬಿಹಾರದ ಆಡಳಿತಾರೂಢ ಜೆಡಿ(ಯು) ರಾಷ್ಟ್ರೀಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದ ಯಾದವ್, ಸದ್ಯ ರಾಜ್ಯಸಭಾ ಸದಸ್ಯರಾಗಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ