ಅಹಮ್ಮದಾಬಾದ್: ಬಿಜೆಪಿ ಸೇರಲು 1 ಕೋಟಿ ರೂ. ಆಮಿಷ ಬಂದಿತ್ತು ಎಂದು ಗುಜರಾತ್ ನ ಪಟೇಲ್ ಮೀಸಲಾತಿ ಹೋರಾಟಗಾರ ಹಾರ್ದಿಕ್ ಪಟೇಲ್ ಆಪ್ತ ಮಾಧ್ಯಮಗಳಿಗೆ ಬಹಿರಂಗಪಡಿಸಿದ್ದಾರೆ.
ಉತ್ತರ ಗುಜರಾತ್ ನ ಪಟೇಲ್ ಸಮುದಾಯದ ನಾಯಕ ನರೇಂದ್ರ ಪಟೇಲ್ ನಗದು ಸಮೇತ 1 ಕೋಟಿ ರೂ. ಗಳನ್ನು ಪ್ರದರ್ಶಿಸಿದ್ದಾರೆ. ಹಾರ್ದಿಕ್ ಪಟೇಲ್ ಅವರ ಹಲವು ಆಪ್ತರು ಬಿಜೆಪಿಗೆ ಸೇರ್ಪಡೆಗೊಂಡ ಬೆನ್ನಲ್ಲೇ ನರೇಂದ್ರ ಪಟೇಲ್ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.
ಹಾರ್ದಿಕ್ ಪಟೇಲ್ ರ ಇನ್ನೊಬ್ಬ ಆಪ್ತ ವರುಣ್ ಪಟೇಲ್ ಮೂಲಕ ಬಿಜೆಪಿ 1 ಕೋಟಿ ರೂ. ಆಫರ್ ನೀಡಿದೆ ಎಂದು ಅವರು ಆರೋಪಿಸಿದ್ದಾರೆ. ಆದರೆ ಬಿಜೆಪಿ ಇದನ್ನು ತಳ್ಳಿ ಹಾಕಿದ್ದು, ಇದೆಲ್ಲಾ ಕಾಂಗ್ರೆಸ್ ನ ಕುತಂತ್ರ ಎಂದಿದೆ. ಚುನಾವಣೆ ಹತ್ತಿರ ಬರುತ್ತಿರುವ ಹಿನ್ನಲೆಯಲ್ಲಿ ಗುಜರಾತ್ ನಲ್ಲಿ ರಾಜಕೀಯ ಚಟುವಟಿಕೆ ಬಿರುಸಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ