Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಸಿಎಂ ಮತ್ತೆ ಕಣ್ಣೀರು ಹಾಕಿದ್ದು ಏಕೆ?

ಸಿಎಂ ಮತ್ತೆ ಕಣ್ಣೀರು ಹಾಕಿದ್ದು ಏಕೆ?
ಮಂಡ್ಯ , ಸೋಮವಾರ, 15 ಏಪ್ರಿಲ್ 2019 (18:13 IST)
ಚುನಾವಣೆ ಹೊಸ್ತಿಲಲ್ಲಿ ಅದೂ ಪ್ರಚಾರದ ವೇಳೆ ಭಾವುಕರಾದ ಸಿಎಂ ಕುಮಾರಸ್ವಾಮಿ ಮತ್ತೆ ಕಣ್ಣೀರು ಹಾಕಿದ್ದಾರೆ.

ಕೆಆರ್ ಪೇಟೆ ಪ್ರಚಾರ ಸಭೆಯಲ್ಲಿ ಸಿಎಂ ಕಣ್ಣೀರು ಹಾಕಿದ್ದಾರೆ ಮತ್ತು ಅದಕ್ಕೆ ಸ್ಪಷ್ಟನೆಯನ್ನೂ ಕೊಟ್ಟಿದ್ದಾರೆ.

ನಾನು ಕಣ್ಣೀರು ಹಾಕೋದನ್ನ ನಿಲ್ಲಿಸಿದ್ದೆ. ಇವತ್ತು ಎಚ್. ವಿಶ್ವನಾಥ್ ಅವ್ರು ಕೆಲವು ಮಾತನ್ನ ಹೇಳಿದ್ರು. ಯಾರು ನಿನ್ನ ಕಷ್ಟ ಅರ್ಥ ಮಾಡಿಕೊಳ್ಳಲ್ಲ, ನಿನ್ನ ಪರಿಸ್ಥಿತಿ ಯೋಚನೆ ಮಾಡಲ್ಲ. ಅದು ನಿನ್ನ ಆರೋಗ್ಯದ ಮೇಲೆ ಯಾವ ಪರಿಣಾಮ‌ ಬೀರಿದೆ ಅನ್ನೋದನ್ನ ಯೋಚನೆ ಮಾಡಲ್ಲ ಎಂದರು.

ಆ ಮಾತುಗಳು ನನ್ನ ಮನಸ್ಸಿನ ಮೇಲೆ ಪರಿಣಾಮ ಬೀರಿದ್ವು. ನೋವು ತಡಯಲಿಕ್ಕೆ ಆಗದೇ ನಾನು ಕಣ್ಣೀರು ಹಾಕಿದ್ದೇನೆ ಎಂದರು.

ನಾನು ಆಕಸ್ಮಿಕವಾಗಿ ರಾಜಕೀಯಕ್ಕೆ ಬಂದವನು. ನಾನು ಶಿಕ್ಷಣ ಮುಗಿಸಿ ಸಿನಿಮಾ ವಿತರಕನಾಗಿ ನನ್ನ ಜೀವನ ನಡೆಸುತ್ತಿದ್ದೆ. ಅಚಾನಕ್ ಆಗಿ ರಾಜಕೀಯಕ್ಕೆ ಬಂದೆ. ಅಲ್ಲಿಂದ ಇಲ್ಲಿಯವರೆಗೇ ನನ್ನ ಮನೆ ಬಳಿ ಕಷ್ಟ ಹೇಳಿಕೊಂಡು ಬಂದವರ ಜಾತಿ ಧರ್ಮ ಕೇಳದೆ ಸಹಾಯ ಮಾಡಿದ್ದೇನೆ ಅಂತ ಸಿಎಂ ಹೇಳಿದ್ರು.

ಸಿನಿಮಾದವು ಬಂದು ಮಂಡ್ಯ ಸ್ವಾಭಿಮಾನ ಅಂತ ಮಾತಾಡ್ತವೆ. ಅವು ಇವು ಎಂದು ಯಶ್, ದರ್ಶನ್ ವಿರುದ್ಧ ಹರಿಹಾಯ್ದ ಸಿಎಂ, ರೈತರು ಆತ್ಮಹತ್ಯೆ ಮಾಡಿಕೊಂಡು ತಾಯಂದಿರು ಕಣ್ಣೀರು ಹಾಕುವಾಗ ಯಾವ ನಟರು ಬಂದಿದ್ರು..? ಇವತ್ತು ಮಂಡ್ಯ ಸ್ವಾಭಿಮಾನ ಎನ್ನುತ್ತಿದ್ದಾರಲ್ಲ ಅಂತ ಟೀಕೆ ಮಾಡಿದ್ರು.



Share this Story:

Follow Webdunia kannada

ಮುಂದಿನ ಸುದ್ದಿ

ಅವನ್ಯಾವನೋ ಯಶ್ ಅಂತೆ ಅಂದ್ರು ಸಿಎಂ!