Webdunia - Bharat's app for daily news and videos

Install App

ಮೋದಿ ಪರ ಪ್ರಚಾರಕ್ಕೆ ಸಾಪ್ಟ್ ವೇರ್ ಉದ್ಯೋಗಿ ಮಾಡಿದ್ದೇನು?

Webdunia
ಬುಧವಾರ, 17 ಏಪ್ರಿಲ್ 2019 (15:49 IST)
ದಿನದಿಂದ ದಿನಕ್ಕೆ ಪ್ರಧಾನಿ ಮೋದಿಗೆ ಅಭಿಮಾನಿಗಳ ಸಂಖ್ಯೆ ಹೆಚ್ಚುತ್ತಲೆ ಇದ್ದಾರೆ. ಸಾಫ್ಟವೇರ್ ಕಂಪನಿಯಲ್ಲಿ ಕೆಲಸ ಮಾಡುವ ಯುವಕ 20 ದಿನ ರಜೆ ಹಾಕಿ ಬಿಜೆಪಿ ಪರ ಪ್ರಚಾರ ಶುರುವಿಟ್ಟುಕೊಂಡಿದ್ದಾನೆ.

ಬೆಂಗಳೂರಿನ ಯುಟಿ ಇನ್ಫೋಸೊಲುಷನ್ ಕಂಪನಿಯಲ್ಲಿ ಸಾಫ್ಟವೇರ್ ಕಂಪನಿಯಲ್ಲಿ ಕೆಲಸ ಮಾಡ್ತಾ ರಾಜು ರೆಡ್ಡಿ ಎಂಬ ವ್ಯಕ್ತಿ ಪ್ರಧಾನಿ ಮೋದಿ ಪರ ಪ್ರಚಾರ ಮಾಡಲು ಇಪ್ಪತ್ತು ದಿನ ರಜೆ ಹಾಕಿ ಬೀದರ್ ಗೆ ಬಂದಿದ್ದಾರೆ. ಮೂಲತಃ ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ವಿಠಲಾಪುರದವರಾದ ರಾಜು ರೆಡ್ಡಿ, ಮೋದಿಯನ್ನ ಮತ್ತೊಮ್ಮೆ ಪ್ರಧಾನಿ ಮಾಡಲು ತಮ್ಮ ಕಂಪನಿ ಕೆಲಸಕ್ಕೆ 20 ದಿನಗಳ ಕಾಲ ರಜೆ ಹಾಕಿ ಫೀಲ್ಡ್ ಗೆ ಇಳಿದಿದ್ದಾರೆ.

ಜಿಲ್ಲೆಯಲ್ಲಿ ಈಗಾಗಲೇ ಬೈಕ್ ರ್ಯಾಲಿ ಮಾಡಿ ತಮ್ಮ ಸ್ವಂತ ಖರ್ಚಿನಲ್ಲಿ ಮನೆ ಮನೆಗೆ ತೆರಳಿ ಪ್ರಚಾರ ನಡೆಸಿದ್ದಾರೆ. ಅಲ್ಲದೆ ಸಾಮಾಜಿಕ ಜಾಲತಾಣದ ಮೂಲಕ ಕೇಂದ್ರದಲ್ಲಿ ಮತ್ತೊಮ್ಮೆ ಮೋದಿಯನ್ನ ಪ್ರಧಾನಿಯನ್ನ ಮಾಡಬೇಕು ಅದಕ್ಕೆ ಭಗವಂತ ಖೂಬಾ ಅವರಿಗೆ ಮತ ಚಲಾಯಿಸಿ ಅಂತ  ಪ್ರಚಾರ ನಡೆಸಿದ್ದಾರೆ.

ಕಳೆದ ಎರಡು ದಿನಗಳ ಹಿಂದೆ ಮಂಗಳೂರಿನ ಸುಧಿಂದರ್ ಎಂಬುವರು ಪ್ರಧಾನಿ ಪರ ಪ್ರಚಾರ ಮಾಡಲು ಆಸ್ಟ್ರೇಲಿಯಾದಲ್ಲಿನ ತಮ್ಮ ಉದ್ಯೋಗಕ್ಕೆ ರಾಜೀನಾಮೆ ನೀಡಿ ಬಂದಿದ್ದರು. ಅದರ ಬೆನ್ನಲ್ಲೆ ಬೀದರ್ ನ ರಾಜು ರೆಡ್ಡಿ ಮೋದಿ ಪರ ಪ್ರಚಾರಕ್ಕೆ ಇಳಿದಿದ್ದು ವಿಶೇಷವಾಗಿದೆ. ಇದು ಬೀದರ್ ಜನತೆಯ ಮೇಲೆ ಎಷ್ಟರ ಮಟ್ಟಿಗೆ ಪರಿಣಾಮ ಬೀರುತ್ತೆ ಅನ್ನೋದು ಕುತೂಹಲಕ್ಕೆ ಕಾರಣವಾಗಿದೆ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments