ಹೈವೋಲ್ಟೇಜ್ ಕಣವಾಗಿರುವ ಮಂಡ್ಯದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಮತದಾನದ ದಿನವೂ ಟೆಂಪಲ್ ರನ್ ಮಾಡಿದ್ದಾರೆ.
ಮತದಾನ ಆರಂಭಕ್ಕೂ ಮುನ್ನ ದೇವರ ಮೊರೆ ಹೋಗಿದ್ರು ಸುಮಲತಾ.
ಮೊದಲು ನಾಡ ದೇವತೆ ದರ್ಶನ ಪಡೆದುಕೊಂಡರು. ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ್ರು.
ಆ ಬಳಿಕ ಅಂಬರೀಶ್ ಅವರ ಹುಟ್ಟೂರಲ್ಲಿ ಮತದಾನ ಮಾಡಿದ್ರು. ದೊಡ್ಡರಸಿನಕೆರೆ, ಅಂಬರೀಶ್ ಹುಟ್ಟೂರು. ಈ ಗ್ರಾಮದಲ್ಲಿ ಸುಮಲತಾ ತಮ್ಮ ಹಕ್ಕು ಚಲಾಯಿಸಿದರು. ದೊಡ್ಡರಸಿನಕೆರೆಯಲ್ಲಿ ಸುಮಲತಾ, ಅಭಿಷೇಕ್ ಗೌಡ ಮತ ಹಕ್ಕು ಹಾಕಿದ್ರು.