Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಹಿಮಾಚಲ ಪ್ರದೇಶದ ರಮಣೀಯ ಪ್ರವಾಸಿ ತಾಣಗಳು

ಹಿಮಾಚಲ ಪ್ರದೇಶದ ರಮಣೀಯ ಪ್ರವಾಸಿ ತಾಣಗಳು
ಶೋಝಾ , ಶುಕ್ರವಾರ, 19 ಆಗಸ್ಟ್ 2016 (15:11 IST)
ಶೋಜಾ: ಮಳೆಗಾಲ ಶುರುವಾಗಿದೆ. ಪ್ರವಾಸ ಪ್ರಿಯರು ಪ್ರಕೃತಿ ಸೌಂದರ್ಯವನ್ನು ಆನಂದಿಸಲು ಉತ್ತಮ ಪ್ರವಾಸಿ ತಾಣಗಳನ್ನು ಹುಡುಕುವ ಸಮಯ ಬಂದಂತಾಗಿದೆ. ಈ ಮೂರು ಪ್ರಮುಖ ಸ್ಥಳಗಳ ವಿವರವನ್ನು ಪಡೆದುಕೊಂಡು ನಿಮ್ಮ ಪ್ರವಾಸವನ್ನು ಇಂದೇ ಆರಂಭಿಸಿ.
ಶೋಜಾ, ಹಿಮಾಚಲ ಪ್ರದೇಶ
 
ಹಿಮಾಚಲ ಪ್ರದೇಶದ ಕಣಿವೆಗಳಲ್ಲಿ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿರುವ ಅದ್ಭುತ ತಾಣ ಶೋಜಾ. ಈ ಪ್ರದೇಶ ಸಂಪೂರ್ಣವಾಗಿ ಅಭಿವೃದ್ಧಿ ಹೊಂದದಿದ್ದರು ಪ್ರಕೃತಿ ಸೌಂದರ್ಯದಿಂದ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಪ್ರವಾಸಿಗರು ಜನಸಂದಣಿಯಿಂದ ತಪ್ಪಿಸಿಕೊಂಡು ಈ ಪ್ರದೇಶಕ್ಕೆ ಭೇಟಿ ನೀಡಿ ಪ್ರಕೃತಿ ಸೌಂದರ್ಯವನ್ನು ಸವಿಯಬಹುದಾಗಿದೆ.  
 
ದೇವಪ್ರಯಾಗ, ಉತ್ತರಾಖಂಡ್
 
ಉತ್ತರಾಖಂಡ್ ರಾಜ್ಯದ ಅಲಕನಂದಾ ಮತ್ತು ಭಾಗೀರಥಿ ನದಿತೀರದಲ್ಲಿರುವ ದೇವಪ್ರಯಾಗವೆಂಬ ಗ್ರಾಮ, ತನ್ನ ಪ್ರಕೃತಿ ಸೌಂದರ್ಯದಿಂದ ಪ್ರವಾಸಿಗರನ್ನು ಕೈಬಿಸಿ ಕರೆಯುತ್ತಿದೆ. ಈ ಗ್ರಾಮ ಆಧ್ಯಾತ್ಮ, ಸಂಪ್ರದಾಯ ಮತ್ತು ಪ್ರಾಚೀನ ಇತಿಹಾಸದ ತವರೂರಾಗಿದೆ. ಮುಂಗಾರು ಮಳೆ ತೀವ್ರವಾಗಿ ಸುರಿಯುವ ಹಿನ್ನೆಲೆಯಲ್ಲಿ ಈ ಗ್ರಾಮವನ್ನು ಎತ್ತರದಲ್ಲಿ ನಿರ್ಮಿಸಲಾಗಿದೆ. ಪ್ರವಾಸಿಗರು ಒಮ್ಮೆಯಾದರೂ ಈ ಪ್ರದೇಶಕ್ಕೆ ಭೇಟಿ ನೀಡಿ ಇಲ್ಲಿನ ಪ್ರಕೃತಿ ಸೌಂದರ್ಯವನ್ನು ಸವಿಯಬೇಕಾಗಿದೆ.
 
ಓರ್ಚ್ಛಾ, ಮಧ್ಯಪ್ರದೇಶ
 
16 ನೇಯ ಶತಮಾನದಲ್ಲಿ ರಾಜಾ ರುದ್ರ ಪ್ರತಾಪ್ ಅವರು ಸ್ಥಾಪಿಸಿರುವ ಪುಟ್ಟ ಗ್ರಾಮ ಓರ್ಚ್ಛಾ. ಈ ಪ್ರದೇಶದಲ್ಲಿ ರಾಜಾ ರುದ್ರ ಪ್ರತಾಪ್ ಅವರು ನಿರ್ಮಿಸಿರುವ ದೇವಾಲಯ ಮತ್ತು ಕೋಟೆಗಳು ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಮಳೆಗಾಲದಲ್ಲಿ ಮೈ ತುಂಬಿ ಹರಿಯುವ ನದಿಗಳು ಮತ್ತು ವನ್ಯಮೃಗಗಳ ನೆಲೆಗಳು ಪ್ರವಾಸಿಗರನ್ನು ಕೈಬಿಸಿ ಕರೆಯುತ್ತಿವೆ.
 
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಮತ್ತೆ ವಿವಾದದ ಸುಳಿಯಲ್ಲಿ ನಿರ್ದೇಶಕ ರಾಮ್ ಗೋಪಾಲ್ ವರ್ಮಾ