Webdunia - Bharat's app for daily news and videos

Install App

ದಸರಾ ರಜೆಯಲ್ಲಿ ಮುರುಡೇಶ್ವರಕ್ಕೆ ತೆರಳಲು ರೆಡಿ ಆಗಿದ್ದೀರಾ: ಹಾಗಿದ್ದರೆ ಇಲ್ಲಿ ಗಮನಿಸಿ

Krishnaveni K
ಭಾನುವಾರ, 6 ಅಕ್ಟೋಬರ್ 2024 (17:59 IST)
Photo Credit: Facebook
ಮುರುಡೇಶ್ವರ: ದಸರಾ ಹಬ್ಬದ ಪ್ರಯುಕ್ತ ಶಾಲೆಗಳಿಗೆ ರಜೆ ನೀಡಲಾಗಿದ್ದು ಎಲ್ಲರೂ ಪ್ರವಾಸ ತೆರಳುತ್ತಿದ್ದಾರೆ. ಆದರೆ ಮುರುಡೇಶ್ವರ ಪ್ರವಾಸ ಮಾಡಲು ಹೊರಟಿದ್ದರೆ ಈ ವಿಚಾರವನ್ನು ಗಮನದಲ್ಲಿಡಿ.

ಮುರುಡೇಶ್ವರದಲ್ಲಿ ಶಿವನ ದರ್ಶನ ಜೊತೆಗೆ ಕಡಲ ಅಲೆಯ ಜೊತೆಗೆ ಬೋಟಿಂಗ್ ನಡೆಸಲು ಎಲ್ಲರೂ ಇಷ್ಟಪಡುತ್ತಾರೆ. ಇದು ಪ್ರವಾಸಿಗರ ಮೆಚ್ಚಿನ ತಾಣವೂ ಹೌದು. ಆದರೆ ಮುರುಡೇಶ್ವರಕ್ಕೆ ಪ್ರವಾಸ ಮಾಡುವವರಿಗೆ ಈಗ ಪೊಲೀಸರು ಕೆಲವೊಂದು ನಿರ್ಬಂಧ ವಿಧಿಸಿದ್ದಾರೆ.

ಇತ್ತೀಚೆಗೆ ಮುರುಡೇಶ್ವರಕ್ಕೆ ಪ್ರವಾಸ ಬಂದು ಸಮುದ್ರಕ್ಕೆ ಇಳಿದು ಎಂಜಾಯ್ ಮಾಡಲು ಹೊರಟಿದ್ದ ಬೆಂಗಳೂರು ಮೂಲದ ವಿದ್ಯಾರ್ಥಿಯೊಬ್ಬರು ಮೃತಪಟ್ಟಿದ್ದರು. ಈ ಹಿನ್ನಲೆಯಲ್ಲಿ ಈಗ ಸ್ಥಳದಲ್ಲಿ ಪೊಲೀಸರು ಸರ್ಪಗಾವಲು ಹಾಕಿದ್ದಾರೆ. ಸಮುದ್ರದ ನೀರಿನಲ್ಲಿ ಮೋಜು ಮಸ್ತಿ ಮಾಡುವವರಿಗೆ ನಿರ್ಬಂಧ ಹೇರಲಾಗಿದೆ.

ವಿದ್ಯಾರ್ಥಿ ಮೃತಪಟ್ಟ ಹಿನ್ನಲೆಯಲ್ಲಿ ಸಮುದ್ರದ ನೀರಿಗಿಳಿಯದಂತೆ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ. ಇದರಿಂದಾಗಿ ಮುರುಡೇಶ್ವರ ದೇವರ ದರ್ಶನ ಮಾಡಿ ಸಮುದ್ರ ನೀರಿನಲ್ಲಿ ಎಂಜಾಯ್ ಮಾಡಲಾಗದೇ ಪ್ರವಾಸಿಗರು ನಿರಾಸೆಯಿಂದ ಮರಳುತ್ತಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments