ಮೈಸೂರು-ಬೆಂಗಳೂರು ಎಕ್ಸ್ಪ್ರೆಸ್ ಹೈವೇಯನ್ನು ಪ್ರಧಾನಿ ನರೇಂದ್ರ ಮೋದಿ ಬಂದು ಉದ್ಘಾಟನೆ ಮಾಡಿದ್ರು.. ಇದೀಗ ಇಂದಿನಿಂದ ಟೋಲ್ ಸಂಗ್ರಹ ಆರಂಭವಾಗಿದೆ.. ಈ ಕುರಿತು KPCC ಅಧ್ಯಕ್ಷ D.K ಶಿವಕುಮಾರ್ ಆಕ್ಷೇಪವೆತ್ತಿದ್ದಾರೆ.
ಹೈವೇ ಉದ್ಘಾಟನೆ ಮಾಡಿದ್ದೇ ಸರಿಯಿಲ್ಲ.. ಅವರು ಫುಲ್ ರೋಡ್ ಮಾಡಬೇಕಿತ್ತು ಬಳಿಕ ಉದ್ಘಾಟನೆ ಮಾಡಬೇಕಿತ್ತು ಎಂದಿದ್ದಾರೆ. ರೋಡನ್ನು ನ್ಯಾಷನಲ್ ಪಾಲಿಸಿ ಪ್ರಕಾರ ಮಾಡಬೇಕಿತ್ತು.. ರಸ್ತೆ ಗುತ್ತಿಗೆದಾರರು ಸರಿಯಾಗಿ ಕೆಲಸ ಮಾಡಿಲ್ಲ..
ಈಗಾಗಲೇ 82 ಜನ ಮೃತಪಟ್ಟಿದ್ದಾರೆ. ಸರ್ವೀಸ್ ರೋಡ್ ಮಾಡಬೇಕು ಎಂದು ಡಿಕೆಶಿ ಆಗ್ರಹಿಸಿದ್ರು. ನಮ್ಮ ಲೋಕಲ್ ಜನಕ್ಕೆ ಸರ್ವೀಸ್ ರೋಡು ಇರಬೇಕು ಡಿಕೆಶಿ ಹೇಳಿದ್ರು. ಶೌಚಾಲಯಕ್ಕೆಂದು ವಾಹನ ನಿಲ್ಲಿಸಲು ಅವಕಾಶ ಇಲ್ಲ. ಯಾವುದೇ ಜಾಗ ಕೂಡಯಿಲ್ಲ.. ಬರಿ ಚುನಾವಣೆಗೋಸ್ಕರ ಬಂದು ಉದ್ಘಾಟನೆ ಮಾಡಿದ್ದು ಸರಿಯಲ್ಲ ಎಂದು ಡಿಕೆಶಿ ಕಿಡಿಕಾರಿದ್ರು.