ಬಾಗಲಕೋಟೆ ಜಿಲ್ಲೆಯ ಬೀಳಗಿ ಕ್ಷೇತ್ರದಲ್ಲಿ ಬಿಜೆಪಿಯ ಇಬ್ಬರು ಅಭ್ಯರ್ಥಿಗಳು ಸ್ಪರ್ಧೆ ಮಾಡ್ತಿದ್ದು, ತೀವ್ರ ಕುತೂಹಲ ಮೂಡಿಸಿದೆ.. ಬೀಳಗಿ ಕ್ಷೇತ್ರದಲ್ಲಿ ಸಚಿವ ಮುರುಗೇಶ ನಿರಾಣಿ ಹಾಗೂ ಸಹೋದರ ಸಂಗಮೇಶ ನಿರಾಣಿ ನಾಮಪತ್ರ ಸಲ್ಲಿಸಿದ್ದಾರೆ.. ಮುರುಗೇಶ್ ನಿರಾಣಿಗೆ ಬಿಜೆಪಿ ಹೈಕಮಾಂಡ್ ಅಧಿಕೃತ ಅಭ್ಯರ್ಥಿಯೆಂದು ಟಿಕೆಟ್ ನೀಡಿದೆ.. ಆದರೆ ಸಂಗಮೇಶ ನಿರಾಣಿ ಸಹ ಬಿಜೆಪಿ ಅಭ್ಯರ್ಥಿಯೆಂದು ನಾಮಪತ್ರ ಸಲ್ಲಿಸಿದ್ದು, ಕುತೂಹಲ ಮೂಡಿಸಿದೆ.. ಮುರುಗೇಶ್ ನಿರಾಣಿ ನಾಮಪತ್ರ ತಿರಸ್ಕೃತಗೊಳ್ಳುವ ಆತಂಕದಿಂದ ಸಹೋದರ ನಾಮಪತ್ರ ಸಲ್ಲಿಸಿರುವ ಸಾಧ್ಯತೆಯಿದೆ.. ಮುರುಗೇಶ್ ನಿರಾಣಿ ನಾಮಪತ್ರದ ಅಫಿಡವಿಟ್ನಲ್ಲಿ ತಪ್ಪು ಮಾಹಿತಿ ನೀಡಿರುವ ಆರೋಪ ಕೇಳಿ ಬಂದಿದೆ.. ತೆರಿಗೆ ಪಾವತಿ ವಿಚಾರದಲ್ಲಿ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ, ರೈತ ಸಂಘದ ಬೆಂಬಲಿತ ಅಭ್ಯರ್ಥಿ ಯಲ್ಲಪ್ಪ ಹೆಗಡೆ ಆರೋಪಿಸಿದ್ದಾರೆ.. ಆಫಿಡವಿಟ್ನಲ್ಲಿ ಯಾವುದೇ ತೆರಿಗೆ ಪಾವತಿ ಬಾಕಿ ಇಲ್ಲ ಎಂದು ಮುರುಗೇಶ್ ನಿರಾಣಿ ತೋರಿಸಿದ್ದಾರೆ. ಈ ಬಗ್ಗೆ ದೂರು ನೀಡಲು ರೈತ ಸಂಘದ ಬೆಂಬಲಿತ ಅಭ್ಯರ್ಥಿ ಯಲ್ಲಪ್ಪ ಹೆಗಡೆ ಮುಂದಾಗಿದ್ದಾರೆ.