ಅಪಹರಣ ಮಾಡಿ ಆ ಬಳಿಕ ಚಿನ್ನಾಭರಣ ದೋಚಿ ಜಮೀನ್ದಾರರೊಬ್ಬರನ್ನು ಕೊಲೆ ಮಾಡಿರುವ ಘಟನೆ ನಡೆದಿದೆ.
ಜಮೀನ್ದಾರ ವೆಂಕಟಪತಿ ಕೊಲೆಯಾದವರಾಗಿದ್ದಾರೆ. ಇವರನ್ನು ದುಷ್ಕರ್ಮಿಗಳು ಅಪಹರಣ ಮಾಡಿ ಚಿನ್ನಾಭರಣ ದೋಚಿದ್ದಾರೆ.
ಆ ಬಳಿಕ ಮೃತದೇಹವನ್ನು ಯಲಹಂಕ ಸಮೀಪ ಎಸೆದು ಪರಾರಿಯಾಗಿದ್ದಾರೆ. ಮಧ್ಯರಾತ್ರಿ ಈ ಘಟನೆ ನಡೆದಿದೆ. ಜಮೀನ್ದಾರನ ಬಳಿಯಿದ್ದ ಎಂಟು ಉಂಗುರ, ಚೈನ್, ನಗದನ್ನು ದುಷ್ಕರ್ಮಿಗಳು ಕೊಲೆ ಮಾಡಿ ದೋಚಿದ್ದಾರೆ.
ವೆಂಕಟಪತಿಯವರನ್ನು ಜಮೀನು ವಿವಾದ ಹಿನ್ನೆಲೆಯಲ್ಲಿ ಇಲ್ಲವೆ ಅವರ ಬಳಿಯಿದ್ದ ಚಿನ್ನಾಭರಣಗಳನ್ನು ದೋಚಲು ಅಪಹರಿಸಿ ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿದೆ.