Webdunia - Bharat's app for daily news and videos

Install App

ಕೊಟ್ಟ ಮಾತು ತಪ್ಪದ ಸಚಿವ ಜಮೀರ್ ಅಹ್ಮದ್: ತುಂಗ ಭದ್ರಾ ಗೇಟ್ ರಿಪೇರಿ ಮಾಡಿದ ಕಾರ್ಮಿಕರಿಗೆ ಭಾರೀ ಮೊತ್ತದ ಬಹುಮಾನ

Krishnaveni K
ಸೋಮವಾರ, 19 ಆಗಸ್ಟ್ 2024 (11:33 IST)
ಕೊಪ್ಪಳ: ತುಂಗ ಭದ್ರಾ ಡ್ಯಾಮ್ ಗೇಟ್ ರಿಪೇರಿ ಮಾಡಿದ ಕಾರ್ಮಿಕರಿಗೆ ಸಚಿವ ಜಮೀರ್ ಅಹ್ಮದ್ ಕೊಟ್ಟ ಮಾತಿನಂತೇ ಭಾರೀ ಮೊತ್ತದ ಬಹುಮಾನ ಹಣ ನೀಡಿದ್ದಾರೆ.

ತುಂಗಭದ್ರಾ ಡ್ಯಾಮ್ ಗೇಟ್ ನ ಚೈನ್ ಕಟ್ ಆಗಿ ಅಪಾರ ಪ್ರಮಾಣದ ನೀರು ಹರಿದು ಹೋಗಿತ್ತು. ಇದರಿಂದಾಗಿ ಸುತ್ತಮುತ್ತಲ ಜನರಿಗೆ ನೆರೆಯ ಭೀತಿ ಎದುರಾಗಿತ್ತು. ಹೀಗೇ ಆದರೆ ಡ್ಯಾಮ್ ನ ಸಂಪೂರ್ಣ ನೀರು ಖಾಲಿಯಾಗುವ ಭೀತಿಯಿತ್ತು. ಇದು ರಾಜ್ಯ ಸರ್ಕಾರಕ್ಕೆ ಪ್ರತಿಷ್ಠೆಯ ವಿಚಾರವೂ ಆಗಿತ್ತು.

ಹೀಗಾಗಿ ಗೇಟ್ ದುರಸ್ಥಿ ಕಾರ್ಯದಲ್ಲಿ ತೊಡಗಿಸಿಕೊಂಡ ಕಾರ್ಮಿಕರಿಗೆ ಸಚಿವ ಜಮೀರ್ ಅಹ್ಮದ್ ತಲಾ 50 ಸಾವಿರ ರೂ. ಬಹುಮಾನ ಹಣ ನೀಡುವುದಾಗಿ ಘೋಷಣೆ ಮಾಡಿದ್ದರು. ಸಾಮಾನ್ಯವಾಗಿ ಕೆಲಸವಾದ ಮೇಲೆ ರಾಜಕಾರಣಿಗಳು ಕೊಟ್ಟ ಮಾತನ್ನು ಉಳಿಸಿಕೊಳ್ಳುವುದು ಅಪರೂಪ.

ಆದರೆ ಗೇಟ್ ದುರಸ್ಥಿ ಮಾಡಿ ತಮ್ಮ ಸರ್ಕಾರದ ಮಾನ ಕಾಪಾಡಿದ ಕಾರ್ಮಿಕರಿಗೆ ಜಮೀರ್ ಅಹ್ಮದ್ ಕೊಟ್ಟ ಮಾತಿನಂತೇ ಬಹುಮಾನ ಹಣ ನೀಡಿದ್ದಾರೆ. ಗೇಟ್ ದುರಸ್ಥಿಯಾಗುತ್ತಿದ್ದಂತೇ ಈ ಕಾಯಕದಲ್ಲಿ ತೊಡಗಿಸಿಕೊಂಡಿದ್ದ ಎಲ್ಲಾ ಕಾರ್ಮಿಕರಿಗೆ ತಲಾ 50 ಸಾವಿರ ರೂ. ಹಣ ನೀಡಿದ್ದಾರೆ. ಕ್ರೇನ್ ಆಪರೇಟರ್, ಗೇಟ್ ಇಳಿಸುವ ಕಾರ್ಯದಲ್ಲಿ ತೊಡಗಿಸಿಕೊಂಡವರು ಸೇರಿದಂತೆ ಸುಮಾರು 20 ಕಾರ್ಮಿಕರಿಗೆ 50 ಸಾವಿರ ರೂ. ಬಹುಮಾನ ಹಣ ನೀಡಲಾಗಿದೆ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments