ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸಿಟ್ಟಿಗೆ ನಾಲ್ಕು ಕಾರಣಗಳಿವೆ ಎಂದು ಜಲಸಂಪನ್ಮೂಲ ಖಾತೆ ಸಚವ ಎಂ.ಬಿ.ಪಾಟೀಲ್ ವ್ಯಂಗ್ಯವಾಡಿದ್ದಾರೆ.
ಇಂದು ವಿಧಾನಸೌಧದಲ್ಲಿ ಆಯೋಜಿಸಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗುಂಡ್ಲುಪೇಟೆಯ ಉಪಚುನಾವಣೆಯಲ್ಲಿನ ಗೆಲುವಿನಲ್ಲಿ ನನ್ನ ಪಾತ್ರ. ಗೀತಾ ಮಹಾದೇವ್ ಪ್ರಸಾದ್ ಗೆಲುವು, ಸರಕಾರಿ ಕಚೇರಿಗಳಲ್ಲಿ ಬಸವೇಶ್ವರರ ಭಾವಚಿತ್ರ ಕಡ್ಡಾಯಗೊಳಿಸಿರುವುದು, ಮಹಿಳಾ ವಿಶ್ವವಿದ್ಯಾಲಯಕ್ಕೆ ಅಕ್ಕಮಹಾದೇವಿ ಹೆಸರು ನಾಮಕರಣ, ಯಡಿಯೂರಪ್ಪ ಸಿಟ್ಟಿಗೆ ಕಾರಣಗಳಾಗಿವೆ ಎಂದು ತಿಳಿಸಿದ್ದಾರೆ.
ವೀರಶೈವರ ಪರವಾಗಿ ನಾನು ಸ್ಪಂದಿಸುತ್ತಿರುವುದು, ಲಿಂಗಾಯುತ ಮತಗಳು ಕಾಂಗ್ರೆಸ್ ಪರವಾಗುತ್ತಿರುವುದು ಕಂಡ ಯಡಿಯೂರಪ್ಪ ಅವರಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ಯಡಿಯೂರಪ್ಪ ಅವರ ವಯಸ್ಸಿಗೆ ನಾನು ಗೌರವ ಕೊಡುತ್ತಿದ್ದೆ. ಆದರೆ, ನನ್ನ ಜಿಲ್ಲೆಗೆ ಬಂದ ನನ್ನ ವಿರುದ್ಧ ಮನಬಂದಂತೆ ವಾಗ್ದಾಳಿ ನಡೆಸಿರುವುದು ನನಗೆ ಬೇಸರ ತಂದಿದೆ. ನನ್ನನ್ನು ಏಕವಚನದಲ್ಲಿ ಟೀಕಿಸಿದ್ದಾರೆ ಎಂದು ಸಚಿವ ಎಂ.ಬಿ.ಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.