ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ತಲ್ಲಣ ಉಂಟುಮಾಡಿರುವ ಈಶ್ವರಪ್ಪ ನೇತೃತ್ವದ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಗೆ ಕತ್ತರಿ ಹಾಕಲು ಯಡಿಯೂರಪ್ಪ ಬಣ ಇನ್ನಿಲ್ಲದ ಪ್ರಯತ್ನ ಮುಂದುವರಿಸಿದೆ. ಇಂದು ಕೂಡಲಸಂಗಮದಲ್ಲಿ ನಡೆದ ಬ್ರಿಗೇಡ್ ಸಮಾವೇಶದ ಹಿನ್ನಲೆಯಲ್ಲಿ ನಾಳೆ ದೆಹಲಿಯಲ್ಲಿ ವರಿಷ್ಠರ ಜತೆ ಸಂಧಾನ ಸಭೆ ನಡೆಯಲಿದೆ ಎನ್ನಲಾಗಿದೆ.
ಈ ವೇಳೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಬ್ರಿಗೇಡ್ ಇಲ್ಲಿಗೇ ನಿಲ್ಲಿಸುವಂತೆ ಈಶ್ವರಪ್ಪನವರಿಗೆ ಸೂಚಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಆದರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಈಶ್ವರಪ್ಪ, ಯಡಿಯೂರಪ್ಪನವರಿಗೆ ಬ್ರಿಗೇಡ್ ಭಯ. ಅದಕ್ಕೇ ವರಿಷ್ಠರ ಮೇಲೆ ಒತ್ತಡ ತರುವ ಕೆಲಸ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
ಇಂದು ಕೂಡಲ ಸಂಗಮದಲ್ಲಿ ನಡೆದ ಬ್ರಿಗೇಡ್ ಸಮಾವೇಶಕ್ಕೆ ಹಲವು ರಾಜ್ಯ ಬಿಜೆಪಿ ನಾಯಕರು ಭಾಗವಹಿಸಿದ್ದರು. ಮಾಜಿ ಪೊಲೀಸ್ ವರಿಷ್ಠ ಬಿಜೆಪಿಯ ಸಂಗ್ರಾಮ್ ಸಿಂಗ್ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು. ಆದರೆ ಸಮಾವೇಶಕ್ಕೆ ಜನರಿಂದ ಅಷ್ಟೊಂದು ದೊಡ್ಡ ಮಟ್ಟದ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಬಹುತೇಕ ಖುರ್ಚಿಗಳು ಖಾಲಿಯಿತ್ತು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ