ಬೆಂಗಳೂರು: ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಬಂದಾಗ ಮುನಿಸಿಕೊಂಡು ಕುಳಿತರೆ ಹೇಗೆ? ಹಾಗಾಗಿ ಅರಮನೆ ಮೈದಾನದಲ್ಲಿ ನಡೆದ ಏಕತಾ ಸಮಾವೇಶದಲ್ಲಿ ರಾಜ್ಯ ಬಿಜೆಪಿ ನಾಯಕರಾದ ಯಡಿಯೂರಪ್ಪ-ಈಶ್ವರಪ್ಪ ಮುನಿಸು ಮರೆತು ದೋಸ್ತಿಗಳಂತೆ ಪೋಸ್ ಕೊಟ್ಟಿದ್ದಾರೆ.
ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಆಗಮಿಸಿದ ಸಮಾವೇಶದ ವೇದಿಕೆಯಲ್ಲಿ ಇಬ್ಬರೂ ಇತರ ನಾಯಕರೊಂದಿಗೆ ನಗು ನಗುತ್ತಲೇ ಕಾಣಿಸಿಕೊಂಡರು. ಇದೇ ವೇಳೆ ಮಾತನಾಡಿದ ಅಮಿತ್ ಶಾ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೊಡೆ ತಟ್ಟುತ್ತಿರುವ ವಿಪಕ್ಷಗಳ ಮೇಲೆ ಟೀಕೆಗಳ ಸುರಿಮಾಲೆ ಹರಿಸಿದರು.
ವಿಪಕ್ಷಗಳ ಕೆಲವು ನಾಯಕರ ಬಳಿ ಕಾಳಧನ ಬೇಕಾದಷ್ಟು ಇದೆಯೆಂದು ತೋರುತ್ತದೆ. ಅದಕ್ಕೇ ಅಂತಹವರು ನೋಟು ನಿಷೇಧವನ್ನು ವಿರೋಧಿಸುತ್ತಿದ್ದಾರೆ. ಇನ್ನು ಕೆಲವರಿಗೆ ಪ್ರಧಾನಿಯವರನ್ನು ತೆಗಳುವುದೇ ವೃತ್ತಿಯಾಗಿಬಿಟ್ಟಿದೆ ಎಂದು ವಿಪಕ್ಷಗಳ ಮೇಲೆ ಅಮಿತ್ ಶಾ ಕೆಂಡ ಕಾರಿದರು.
ಸಮಾನತಾ ಸಮಾವೇಶಕ್ಕಾಗಿ ದೂರದೂರುಗಳಿಂದಲೂ ಕಾರ್ಯಕರ್ತರನ್ನು ವಿಶೇಷ ವಾಹನ ವ್ಯವಸ್ಥೆ ಕಲ್ಪಿಸಿ ಮೈದಾನಕ್ಕೆ ಕರೆತರಲಾಗಿತ್ತು. ರಾಷ್ಟ್ರೀಯ ಅಧ್ಯಕ್ಷರು ಬರುವ ಹಿನ್ನಲೆಯಲ್ಲಿ ಮತ್ತು ನಾಳೆ ವಿಪಕ್ಷಗಳು ದೇಶದಾದ್ಯಂತ ಆಕ್ರೋಶ್ ದಿವಸ್ ಆಚರಿಸುವುದರಿಂದಲೋ ಏನೋ, ಕಾರ್ಯಕರ್ತರಲ್ಲೂ ಉತ್ಸಾಹ ಇನ್ನಷ್ಟು ಹೆಚ್ಚಾಗಿತ್ತು.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ