ಬೆಂಗಳೂರು: ರೋಬೋಟಿಕ್ ಯೂರೋ ಸ್ತ್ರೀ ರೋಗ ಶಾಸ್ತ್ರದ ಅತ್ಯಾಧುನಿಕ ಶಸ್ತ್ರಚಿಕಿತ್ಸೆ ಬಗ್ಗೆ ಫೋರ್ಟಿಸ್ ಆಸ್ಪತ್ರೆಯು ಎರಡು ದಿನಗಳ ಕಾಲ ಕಾರ್ಯಾಗಾರ ನಡೆಸುತ್ತಿದೆ.
ಯೂರೋ ಆಂಕೋಲಜಿ, ಯೂರೋ ಗೈನಕಾಲಜಿ, ಆಂಡ್ರಾಲಜಿ, ಟ್ರಾನ್ಸ್ಪ್ಲಾಂಟ್ ಮತ್ತು ರೋಬೋಟಿಕ್ ಸರ್ಜರಿ ಅನುಭವಿಯಾದ ಡಾ. ಮೋಹನ್ ಕೇಶವ್‌ಮೂರ್ತಿ ಈ ಕಾರ್ಯಾಗಾರವನ್ನು ಆಸ್ಪತ್ರೆಯ ಸಭಾಂಗಣದಲ್ಲಿ ನಡೆಸುತ್ತಿದ್ದಾರೆ.
ರೋಬೋಟಿಕ್ ಯೂರೋ ಸ್ತ್ರೀರೋಗ ಶಾಸ್ತ್ರದಲ್ಲಿ ಅತ್ಯಾಧುನಿಕ ಚಿಕಿತ್ಸಾ ವಿಧಾನಗಳು, ನೂತನ ಶಸ್ತ್ರಚಿಕಿತ್ಸೆ, ರೋಬೋಟಿಕ್ ಚಿಕಿತ್ಸೆ ಸೇರಿದಂತೆ ಇತರೆ ಹೊಸ ಚಿಕಿತ್ಸಾ ವಿಧಾನಗಳ ಬಗ್ಗೆ ಕಾರ್ಯಾಗಾರದಲ್ಲಿ ತಿಳಿಸಿಕೊಡಲಾಗುತ್ತದೆ. ಈ ಕಾರ್ಯಾಗಾರದಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಅಭ್ಯಾಸದಲ್ಲಿ ತೊಡಗಿರುವ ವೈದ್ಯರು ಹಾಗೂ ಕಾರ್ಪೋರೇಟ್ ವೈದ್ಯರು ಈ ಕಾರ್ಯಾಗಾರದಲ್ಲಿ ಭಾಗವಹಿಸಬಹುದು.