Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮಹಿಳಾ ದಿನಾಚರಣೆ ಸ್ಪೆಷಲ್: ಋತುಚಕ್ರದ ದಿನ ಅವಳ ಅಂತರಗಂದ ತೊಳಲಾಟ

ಮಹಿಳಾ ದಿನಾಚರಣೆ ಸ್ಪೆಷಲ್: ಋತುಚಕ್ರದ ದಿನ ಅವಳ ಅಂತರಗಂದ ತೊಳಲಾಟ
ಬೆಂಗಳೂರು , ಮಂಗಳವಾರ, 8 ಮಾರ್ಚ್ 2022 (09:20 IST)
ಬೆಂಗಳೂರು: ಹೆಣ್ಣಿನ ಜೀವನದಲ್ಲಿ ಋತುಚಕ್ರವೆಂಬುದು ಪ್ರಮುಖ ಘಟ್ಟ. ಮೊಗ್ಗು ಹೂವಾಗಿ ಅರಳುವ ಸಂದರ್ಭದಲ್ಲಿ ಎಷ್ಟು ಸೂಕ್ಷ್ಮವಾಗಿ ನಿಭಾಯಿಸಬೇಕೋ ಅಷ್ಟೇ ಸೂಕ್ಷ್ಮವಾಗಿ ಆಕೆಯನ್ನು ನಿಭಾಯಿಸಬೇಕಾದ ದಿನಗಳದು.

ಋತುಚಕ್ರದ ಪೂರ್ವದ ದಿನಗಳಲ್ಲಿ ಮತ್ತು ಆ ದಿನಗಳಲ್ಲಿ ಆಕೆಯ ದೇಹದ ಜೊತೆಗೆ ಮನಸ್ಸೂ ಗೊಂದಲದ ಗೂಡಾಗಿರುತ್ತದೆ. ಸಣ್ಣ ಪುಟ್ಟ ವಿಚಾರಕ್ಕೆ ಸಿಡುಕುವುದು, ಬೇಸರಗೊಳ್ಳುವುದು, ಅಳುವುದು ಇತ್ಯಾದಿ ಅತಿಯಾಗಿ ಪ್ರತಿಕ್ರಿಯೆ ನೀಡುವುದು ಸಹಜ.

ಇದನ್ನು ಅರ್ಥ ಮಾಡಿಕೊಳ್ಳದೇ ಆಕೆಯ ಜೊತೆ ಜಗಳವಾಡಿದರೆ ಮನಸ್ಸು, ಮನೆ ಮತ್ತಷ್ಟು ರಾಡಿಯಾಗಬಹುದು. ಹಿಂದಿನ ಕಾಲದಲ್ಲಿ ಈ ಮೂರು ದಿನ ಮಹಿಳೆಯರನ್ನು ಅಡುಗೆ ಮನೆಗೇ ಬಿಟ್ಟುಕೊಳ್ಳುತ್ತಿರಲಿಲ್ಲ. ಶಾಸ್ತ್ರದ ನೆಪದಲ್ಲಿ ಆಕೆಗೆ ಮೂರು ದಿನ ವಿಶ್ರಾಂತಿ ನೀಡಲಾಗುತ್ತಿತ್ತು. ಇಂದು ಅಂತಹ ಸಂಪ್ರದಾಯಗಳಿಲ್ಲ. ಆದರೆ ಹಾಗಂತ ಮಹಿಳೆಗೆ ವಿಶ್ರಾಂತಿಯೂ ಅಗತ್ಯವಿಲ್ಲ ಎಂದಲ್ಲ. ಉದ್ಯೋಗದಲ್ಲಿದ್ದಾಗ ಅನಿವಾರ್ಯವಾಗಿ ಹೊರಗಡೆ ಸುತ್ತಾಡಲೇ ಬೇಕಾಗುತ್ತದೆ. ಆದರೆ ಆಕೆಯ ಮನಸ್ಸು ಅರಿತು ನಡೆದರೆ ಅವಳೂ ನಗುತ್ತಾಳೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೇಡಿಕೆಗಳಿಗೆ ಒಪ್ಪಿದ ಮರುಕ್ಷಣವೇ ಯುದ್ಧ ನಿಲ್ಲಿಸುತ್ತೇವೆ: ರಷ್ಯಾ