Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮಹಿಳೆಯರೇ ಎಂ.ಆರ್‌.ಐ. ಸ್ಕ್ಯಾನ್ ರೂಂನಲ್ಲಿ ಬಟ್ಟೆ ಬದಲಾಯಿಸುವ ಮುನ್ನ ಎಚ್ಚರ

ಮಹಿಳೆಯರೇ ಎಂ.ಆರ್‌.ಐ. ಸ್ಕ್ಯಾನ್ ರೂಂನಲ್ಲಿ  ಬಟ್ಟೆ ಬದಲಾಯಿಸುವ ಮುನ್ನ ಎಚ್ಚರ
ಮುಂಬೈ , ಸೋಮವಾರ, 28 ಜನವರಿ 2019 (06:51 IST)
ಮುಂಬೈ : ಎಂ.ಆರ್‌.ಐ. ಸ್ಕ್ಯಾನ್ ರೂಂನಲ್ಲಿ ಮಹಿಳಾ ರೋಗಿಗಳು ಬಟ್ಟೆ ಬದಲಾಯಿಸುವುದನ್ನು ವಾರ್ಡ್ ಬಾಯ್ ವಿಡಿಯೋ ಮಾಡಿದ ಘಟನೆ ಪುಣೆಯ ಆಸ್ಪತ್ರೆಯೊಂದರಲ್ಲಿ ನಡೆದಿದೆ.


ಲಕೇಶ್ ಲಾಹು ಉಟ್ಟೆಕರ್(25 ವರ್ಷ) ಇಂತಹ ನೀಚ ಕೃತ್ಯ ಎಸಗಿದ ಆರೋಪಿ. ಜನವರಿ 23 ರಂದು ಹೊಟ್ಟೆ ನೋವು ಎಂದು ಆಸ್ಪತ್ರೆಗೆ ದಾಖಲಾದ ಮಹಿಳೆಯೊಬ್ಬಳು ಎಂ.ಆರ್‌.ಐ.  ಸ್ಕ್ಯಾನ್ ಗಾಗಿ ರೂಮಿಗೆ ಹೋಗಿ ಬಟ್ಟೆ ಬದಲಾಯಿಸುವಾಗ ವಾರ್ಡ್ ಬಾಯ್‍ನ ತನ್ನ ಮೊಬೈಲ್ ಫೋನ್ ಇಟ್ಟು ವಿಡಿಯೋ ರೆಕಾರ್ಡ್ ಮಾಡುತ್ತಿರುವುದು ತಿಳಿದುಬಂದಿದೆ. ತಕ್ಷಣ ಮಹಿಳೆ ಪತಿಗೆ ಈ ವಿಚಾರವನ್ನು ತಿಳಿಸಿದ್ದಾಳೆ.


ತಕ್ಷಣ ದಂಪತಿ ಸಮೀಪದ ಕೊರೆಗಾಂವ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆತನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಯುವಕನ ಮೇಲೆ ಮಹಿಳೆಯರಿಂದ ಲೈಂಗಿಕ ಕಿರುಕುಳ. ಈ ಘಟನೆ ನಡೆದದ್ದೆಲ್ಲಿ ಗೊತ್ತಾ?