Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಸೈಕೋ ಗಂಡನಿಂದ ಬೇಸತ್ತ ಪತ್ನಿ....!

ಸೈಕೋ ಗಂಡನಿಂದ ಬೇಸತ್ತ ಪತ್ನಿ....!
bangalore , ಶುಕ್ರವಾರ, 4 ಆಗಸ್ಟ್ 2023 (15:01 IST)
ಗಂಡ ಹೆಂಡಿರ ಜಗಳ ಉಂಡು ಮಲಗುವವರೆಗೆ ಎಂಬ ಜಮಾನ ಹೋಗಿದೆ. ಈಗ ಏನ್‌ ಮಾತನಾಡಿದ್ರೂ ಡಿವೋರ್ಸ್‌ವರೆಗೆ ದಾಂಪತ್ಯವನ್ನ ತಂದೊಯ್ಯುತ್ತದೆ. ಆದ್ರೆ ಇಲ್ಲಿ ಡಿವೋರ್ಸ್‌ ಇಲ್ಲ ಆದ್ರೆ ನಡೆದಿದ್ದು ಮಾತ್ರ ಸೈಕೋಪಾಥ್‌ ಮಾಡುವಂತಹ ಕೆಲಸ . ಯಸ್‌ ಒಂದು ವಿಚಿತ್ರ ಪ್ರಕರಣ ಈಗ ಪೊಲೀಸ್‌ ಠಾಣೆ ಮೆಟ್ಟಿಲೇರಿದೆ. ಪುಷ್ಪಾ ಎಂಬ ಮಹಿಳೆಯ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಕಾರಣಕ್ಕೆ ಪತಿ ವಿಜಯ್‌ ಕುಮಾರ್‌ನನ್ನ ಪೊಲೀಸರು ಬಂಧಿಸಿದ್ದಾರೆ. ಪತಿ ವಿಜಯ್‌ ಮೇಲೆ ವದಕ್ಷಿಣೆ ಕಿರುಕುಳ ಹಲ್ಲೆ ಬೆದರಿಕೆ ಪ್ರಕರಣಗಳು ದಾಖಲಾಗಿದ್ದು ಪತ್ನಿ ಪುಷ್ಪಾಳಿಗೆ ನಿರಂತರವಾಗಿ ಮಾನಸಿಕ ಹಾಗು ದೈಹಿಕವಾಗಿ ಹಿಂಸೆ ನೀಡುತ್ತಿದ್ದ ಎನ್ನಲಾಗಿದೆ. 

ಪುಷ್ಪಾ ಹಾಗು ವಿಜಯ್‌ ಕಳೆದ 23 ವರ್ಷದ ಹಿಂದೆ ಮದ್ವೆಯಾಗಿದ್ದರು. ಇಬ್ಬರಿಗೆ ದರ್ಶನ್‌ ಎಂಬ ಮಗನೂ ಇದ್ದಾರೆ. ಆದ್ರೆ  ವಿಜಯ್‌ ಕುಮಾರ್‌ ವಿಕೃತ ಮನಸ್ಸಿನ ವ್ಯಕ್ತಿಯಾಗಿದ್ದ ಹಿನ್ನಲೆ ಪ್ರತಿ ದಿನ ಮನೆಗೆ ಬಂದು ತಾಯಿ ಮಗನಿಗೆ ಕಿರುಕುಳ ಕೊಡುತ್ತಲೇ ಇದ್ದ . ಹೀಗಾಗಿ ಪುಷ್ಪಾ ಮನೆ ಬಿಟ್ಟು ಬೇರೆ ಕಡೆ ವಾಸ ಮಾಡತೊಡಗಿದ್ದಳು. ಈಕೆಯ ಜೊತೆ ಮಗ ದರ್ಶನ್‌ ಕೂಡ ವಾಸ ಮಾಡ್ತಿದ್ದ . ಅಲ್ಲಿಯೂ ಕೂಡ ಕುಡಿದು ಬಂದು ಪತ್ನಿ ಹಾಗು ಮಗನಿಗೆ ಕಿರುಕುಳ ಕೊಡಲಾರಂಭಿಸಿದ್ದ ವಿಜಯ್‌.

 ಸಾರಥಿನಗರ ಬಳಿ ಇರುವ ಕೋತನೂರು ನಿವಾಸಿಯಾಗಿರುವ ಪುಷ್ಪಾ  ಗಂಡನಿಂದ ದೂರವಾಗಿ ಬೇರೆ ಮನೆ ಮಾಡಿದ್ದರು. ಕಳೆದ 28 ನೇ ತಾರೀಕು ಕುಡಿದು ಬಂದಿದ್ದ ಪತಿ ವಿಜಯ್‌ ಕಿರಿಕ್‌ ಮಾಡಲು ಶುರು ಮಾಡಿದ್ದ . ಕಿರಿಕ್‌ ವೇಳೆ ಸಿಟ್ಟಿಗೆದ್ದ ಪತಿ ವಿಜಯ್‌ ಕುಮಾರ್‌ ಚಾಕುವಿನಿಂದ ಪತಿಯ ಕೈ ಬೆರಳು ಕತ್ತರಿಸಿದ್ದ. ನಂತರ ತಾಯಿ ಮಗನ ಮುಂದೆಯೇ ಸೈಕೋ ಪಾಥ್‌ನಂತೆ ಕತ್ತರಿಸಿದ ಕೈ ಬೆರಳನ್ನು ತಿಂದಿದ್ದ . ಅಷ್ಟೆ ಅಲ್ಲದೆ ನಿನ್ನನ್ನೂ ಕೂಡ ಇದೇ ರೀತಿ ಕತ್ತರಿಸಿ ತಿಂದು ಬಿಡುತ್ತೇನೆ ಹಾಗು ರೌಡಿಗಳಿಗೆ ದುಡ್ಡು ಕೊಟ್ಟಿದ್ದೇನೆ  ಅವರನ್ನ ಕರೆಸಿ ಇಬ್ಬರನ್ನೂ ಕೊಂದು ಹಾಕ್ತಿನಿ ಎಂದು  ಧಮ್ಕಿ ಹಾಕಿದ್ದ . ಇದರಿಂದ ನೊಂದ ಮಹಿಳೆ ಪೊಲೀಸರಿಗೆ ದೂರು ನೀಡಿದ್ದರು. ಸದ್ಯ ಪ್ರಕರಣ ಸಂಬಂಧ ವಿಜಯ್‌ ಕುಮಾರ್‌ನನ್ನ ಬಂಧಿಸಿರುವ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ. ಈ ಸಂಬಂಧ ಕೋಣನಕುಂಟೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

ರಾಜಧಾನಿಯಲ್ಲಿ ಫ್ಲೆಕ್ಸ್, ಬ್ಯಾನರ್‌ ಹಾವಳಿ ಬಿಬಿಎಂಪಿ ಗಪ್ ಚುಪ್