ಉತ್ತರ ಕರ್ನಾಟಕದ ಬಹು ನಿರೀಕ್ಷಿತ ಯೋಜನೆಗಳಲ್ಲಿ ಒಂದಾಗಿರುವ ಮಹದಾಯಿ ಯೋಜನೆಯಲ್ಲಿ ಕೇಂದ್ರ ಸರ್ಕಾರ ಮೀನಾಮೇಷ ಎಣಿಸುತ್ತಿದೆ.
ಹೀಗಂತ ಮಾಜಿ ಶಾಸಕ ಎನ್.ಎಚ್.ಕೋನರಡ್ಡಿ ಆರೋಪಿಸಿದ್ದಾರೆ.
ಮಹದಾಯಿ, ಕಳಸಾ -ಬಂಡೂರಿ ಯೋಜನೆ ಕಾಮಗಾರಿ ಪ್ರಾರಂಭಿಸಲು ಕೇಂದ್ರ ಸರ್ಕಾರ ಪರಿಸರ, ಅರಣ್ಯ ಮತ್ತು ಹವಾಮಾನ ಇಲಾಖೆಯು ನಿರಪೇಕ್ಷಣಾ ಪತ್ರವನ್ನು 2019 ಅಕ್ಟೋಬರ್ 17ರಂದು ಅನುಮತಿ ನೀಡಿದೆ ಎಂದು ಬಿಜೆಪಿ ರಾಜ್ಯದಲ್ಲಿ ದೊಡ್ಡ ಮಟ್ಟದಲ್ಲಿ ಪ್ರಚಾರ ಪಡೆಯುತ್ತಿದ್ದಾರೆ ಎಂದರು.
ಗೋವಾ ರಾಜ್ಯ ಕೇವಲ ಎರಡು ಸಂಸದರನ್ನು ಹೊಂದಿದ್ದರೂ ಕೂಡ ಇಪ್ಪತ್ತೈದು ಸಂಸದರನ್ನು ಹೊಂದಿದ ಕರ್ನಾಟಕ ರಾಜ್ಯಕ್ಕೆ ಕೇಂದ್ರ ಸರ್ಕಾರ ಸರಿಯಾಗಿ ಸ್ಪಂದಿಸುತ್ತಿಲ್ಲ.
ಮಹದಾಯಿ ವಾದ ವಿವಾದಗಳು ನಡೆಯುತ್ತಿದ್ದು, ನ್ಯಾಯಾಧೀಕರಣದ ತೀರ್ಪಿನಂತೆ ನಾವು ನಡೆದುಕೊಳ್ಳುತ್ತೇವೆ ಎಂದು ಗೋವಾ ಮತ್ತು ಮಹಾರಾಷ್ಟ್ರದವರು ಒಪ್ಪಿಕೊಂಡಿದ್ದರು. ನ್ಯಾ.ಜೆ.ಎಂ.ಪಾಂಚಾಳ ಅವರ ನೇತೃತ್ವದಲ್ಲಿ 2010ರಲ್ಲಿ ರಚನೆಯಾದ ಮಹದಾಯಿ ನ್ಯಾಯಾಧೀಕರಣ ಮೂರು ರಾಜ್ಯ ವಾದ-ವಿವಾದವನ್ನು ಆಲಿಸಿ ಅಂತಿಮವಾಗಿ 2018ರ ಆಗಷ್ಟ 14ರಲ್ಲಿ ಆದೇಶ ಮಾಡಿದ್ದರೂ ಇಲ್ಲಿಯವರಿಗೆ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿಲ್ಲ ಎಂದು ಅವರು ದೂರಿದ್ರು.