ಬಲ್ಡೋಟಾ ಕಂಪನಿಯು ಕಪ್ಪತ್ತಗುಡ್ಡದಲ್ಲಿ ಗಣಿಗಾರಿಕೆ ಮಾಡಲು ಮತ್ತೆ ಹುನ್ನಾರ ನಡೆಸಿದ್ದು, ಸರ್ಕಾರದ ಮೇಲೆ ಒತ್ತಡ ತರುತ್ತಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.
ವನ್ಯ ಧಾಮ ಮಾಡಿರುವ ನೋಟಿಫೀಕೇಶನ್ ಹಿಂಪಡೆಯಲು ಜನರಲ್ಲಿ ತಪ್ಪು ಕಲ್ಪನೆ ನೀಡಿ ದಾರಿ ತಪ್ಪಿಸುವ ಕೆಲಸ ನಡೆಸುತ್ತಿರುವುದನ್ನು ಕಂಪನಿ ಕೈಬಿಡಬೇಕೆಂದು ಸಿಎಫ್ ಡಿ ಹಾಗೂ ಜನಾಂದೋಲನಗಳ ಮಹಾಮೈತ್ರಿಯ ಮುಖ್ಯಸ್ಥ ಎಸ್. ಆರ್. ಹಿರೇಮಠ ಹೇಳಿದ್ದಾರೆ.
ಅ.8 ರಂದು ನಡೆದ ವೈಲ್ಡ್ ಲೈಫ್ ಬೋರ್ಡ್ ಸಮಿತಿ ಸಭೆಯಲ್ಲಿ ಈ ವಿಷಯವನ್ನು ಚರ್ಚೆ ನಡೆಸಲಾಗಿದ್ದು, ಸರ್ಕಾರ ಕಪ್ಪತ್ತಗುಡ್ಡವನ್ನು ವನ್ಯ ಜೀವಿ ಧಾಮ ಎಂದು ಮುಂದುವರೆಸಲು ತಿರ್ಮಾಣ ಕೈಕೊಳ್ಳಲಾಗಿದೆ. ಇದನ್ನು ಸಿಎಫ್ ಡಿ ಸ್ವಾಗತಿಸುತ್ತೆ ಅಂದ್ರು.
ಸಮಾಜ ಪರಿವರ್ತನ ಸಮುದಾಯವು ಸುಪ್ರೀಂ ಕೋರ್ಟ್ ನಲ್ಲಿ ಬೆನಗಾನಹಳ್ಳಿಯಲ್ಲಿ 4 ಎಕರೆ 20 ಗುಂಟೆ ಗೋಮಾಳ ಭೂಮಿಯನ್ನು ಡಿ.ಕೆ.ಶಿವಕುಮಾರ ಅಕ್ರಮ ಹಾಗೂ ಕಾನೂನು ಬಾಹಿರವಾಗಿ ಖರೀದಿಸಿದ್ದು, ಇದರಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿರುವ ಬಿ.ಎಸ್.ಯಡಿಯೂರಪ್ಪ ಕೂಡಾ ಶಾಮಿಲಾಗಿದ್ದಾರೆ ಎಂದು ಆರೋಪಿಸಿದ್ರು.
ಅಲ್ಲದೇ ಈ ಪ್ರಕರಣ ಕುರಿತು ಸಿಎಫ್ ಡಿಯೂ ಎಸ್.ಎಲ್.ಡಿಯನ್ನು ಹಾಕಿದ್ದು ಹೋರಾಟವನ್ನು ಮುಂದುವರಿಸಲಾಗುವುದು ಎಂದ್ರು.
ಆದಾಯ ತೆರಿಗೆ ಹಾಗೂ ಇ.ಡಿ., ಡಿ.ಕೆ.ಸುರೇಶ ಇವರನ್ನು ತನಿಖೆಗೆ ಒಳಪಡಿಸಿದ್ದು, ಜೊತೆಗೆ ಡಿ.ಕೆ.ಶಿವಕುಮಾರ ಅವರನ್ನು ತಿಹಾರ ಜೈಲಿನಲ್ಲಿ ಮುಂದುವರೆಯುವಂತೆ ಕ್ರಮ ತೆಗೆದುಕೊಂಡಿರುವುದನ್ನು ಸ್ವಾಗತರ್ಹವಾಗಿದೆ. ಡಿ.ಕೆ.ಶಿವಕುಮಾರ ಹಾಗೂ ಕುಟುಂಬದವರ ಮೇಲೆ ಸಿ.ಟಿ.ಆಯ್ ಎಫ್ ಐ ಆರ್ ದಾಖಲಿಸಿಕೊಂಡು ಸ್ವತಂತ್ರ ತನಿಖೆ ಆರಂಭಿಸುವಂತೆ ಒತ್ತಾಯಿಸಿದ್ರು.