Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಸಹಾರಾ-ಬಿರ್ಲಾ ಡೈರಿ ಬಗ್ಗೆ ಬಿಜೆಪಿ ನಾಯಕರು ಯಾಕೆ ಮಾತನಾಡುತ್ತಿಲ್ಲ: ದಿಗ್ವಿಜಯ್ ಸಿಂಗ್

ಸಹಾರಾ-ಬಿರ್ಲಾ ಡೈರಿ ಬಗ್ಗೆ ಬಿಜೆಪಿ ನಾಯಕರು ಯಾಕೆ ಮಾತನಾಡುತ್ತಿಲ್ಲ: ದಿಗ್ವಿಜಯ್ ಸಿಂಗ್
ಬೆಂಗಳೂರು , ಭಾನುವಾರ, 26 ಫೆಬ್ರವರಿ 2017 (16:30 IST)
ಆಧಾರವಿಲ್ಲದ ಡೈರಿ ಮುಂದಿಟ್ಟುಕೊಂಡು ಕಾಂಗ್ರೆಸ್ ಪಕ್ಷವನ್ನು ತೇಜೋವಧೆ ಮಾಡುತ್ತಿರುವ ಬಿಜೆಪಿ ನಾಯಕರು ಸಹಾರಾ-ಬಿರ್ಲಾ ಡೈರಿಯ ಬಗ್ಗೆ ಯಾಕೆ ಚಕಾರವೆತ್ತುತ್ತಿಲ್ಲ ಎಂದು ಹಿರಿಯ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಪ್ರಶ್ನಿಸಿದ್ದಾರೆ.
 
ಸಹಾರಾ-ಬಿರ್ಲಾ ಡೈರಿಯಲ್ಲಿ ಪ್ರಧಾನಿ ಮೋದಿ ಸೇರಿದಂತೆ ಹಿರಿಯ ಬಿಜೆಪಿ ನಾಯಕರ ಹೆಸರಿದೆ. ಅದರ ಬಗ್ಗೆ ಬಿಜೆಪಿ ನಾಯಕರು ಯಾಕೆ ಮೌನವಾಗಿದ್ದಾರೆ. ಕಾಂಗ್ರೆಸ್ ಸರಕಾರದ ಜನಪರ ಅಡಳಿತದಿಂದ ಬಿಜೆಪಿಗೆ ಭಯವಾಗಿದೆ ಎಂದು ಲೇವಡಿ ಮಾಡಿದರು.
 
 ಸಚಿವರಾಗಿ ನಾಲ್ಕು ವರ್ಷಗಳ ಕಾಲ ಪೂರೈಸಿದವರಿಗೆ ಕೊಕ್ ನೀಡಲಾಗುವುದು ಎನ್ನುವ ವರದಿಗಳನ್ನು ತಳ್ಳಿಹಾಕಿದ್ದಾರೆ.
 
ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿದ್ದು, ಇದೀಗ ಉಪ ಚುನಾವಣೆಗಳು ನಡೆಯಲಿವೆ ಇಂತಹ ಸಂದರ್ಭದಲ್ಲಿ ಸಚಿವ ಸಂಪುಟ ಪುನಾರಚನೆ ಮಾಡುವುದು ಸರಿಯಲ್ಲ ಎಂದು ತಿಳಿಸಿಗದ್ದಾರೆ.
 
ಹಿರಿಯ ಸಚಿವರನ್ನು ಸಚಿವ ಸಂಪುಟದಿಂದ ಕೈಬಿಟ್ಟು ಪಕ್ಷದ ಸಂಘಟನೆಗೆ ಬಳಸಿಕೊಳ್ಳುವ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಅಜೆಂಡಾಗೆ ದಿಗ್ವಿಜಯ್ ಸಿಂಗ್ ಅಂತ್ಯ ಹಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 
 

Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್ ವಿರುದ್ಧ ಬಿಜೆಪಿಯಿಂದ ಷಡ್ಯಂತ್ರ : ಸಿಎಂ ಸಿದ್ದರಾಮಯ್ಯ