Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಅಗ್ನಿ ಶಾಮಕ ಸಿಬ್ಬಂದಿ ವಿರುದ್ಧ ಅಲ್ಲಿನ ಜನರಿಗೆ ಕೋಪ ಏಕೆ?

ಅಗ್ನಿ ಶಾಮಕ ಸಿಬ್ಬಂದಿ ವಿರುದ್ಧ ಅಲ್ಲಿನ ಜನರಿಗೆ ಕೋಪ ಏಕೆ?
ಚಿಕ್ಕಮಗಳೂರು , ಬುಧವಾರ, 27 ಫೆಬ್ರವರಿ 2019 (18:10 IST)
ಅಗ್ನಿ ಶಾಮಕ ದಳ ಎಂದರೆ ತುರ್ತು ಪರಿಸ್ಥಿತಿಯಲ್ಲಿ ಬೆಂಕಿ ನಂದಿಸುವ ಸಿಬ್ಬಂದಿ ಎನ್ನುವುದೇನೋ ಸರಿ. ಆದರೆ ಬೆಂಕಿ ಹತ್ತಿದಾಗಲೂ ಅದನ್ನು ಆರಿಸಿದ ಗೋಜಿಗೆ ಅಲ್ಲಿನ ಸಿಬ್ಬಂದಿ ಹೋಗಿಲ್ಲ. ಹೀಗಾಗಿ ಅಗ್ನಿ ಶಾಮಕ ದಳ ಸಿಬ್ಬಂದಿ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಚಿಕ್ಕಮಗಳೂರಿನಲ್ಲಿ ಸಾಮಾಜಿಕ ಅರಣ್ಯಕ್ಕೆ ಬೆಂಕಿ ಬಿದ್ದಿದೆ. ಅರಣ್ಯದ ಎದುರಲ್ಲೇ ಅಗ್ನಿಶಾಮಕ ಠಾಣೆ ಇದ್ದರೂ ಬೆಂಕಿ ನಂದಿಸದ ಅಧಿಕಾರಿಗಳ ವಿರುದ್ಧ ಜನರು ಗರಂ ಆಗಿದ್ದಾರೆ.

ಸುಮಾರು 20 ಎಕರೆ ಅತ್ಯಮೂಲ್ಯ ಸಸ್ಯ ವರ್ಗ ನಾಶವಾಗಿದೆ. ಹೊಂಗೆ, ಬೇವು, ಬೀಟೆ, ನೆಲ್ಲಿ ಮರಗಳು ಬೆಂಕಿಗಾಹುತಿಯಾಗಿದೆ.
ಬೆಂಕಿಯಿದಾಗಿ ಮೊಲ, ನರಿ, ನವಿಲುಗಳು ವಲಸೆ ಹೋಗಿವೆ. ಬೆಂಕಿ ಹೊತ್ತಿ ಉರಿಯುತ್ತಿದ್ದರೂ ನೋಡಿಯೂ ಸುಮ್ಮನಾದ ಅಗ್ನಿಶಾಮಕ ಸಿಬ್ಬಂದಿ ಕ್ರಮಕ್ಕೆ ಸ್ಥಳೀಯರು ಅಸಮಧಾನ ವ್ಯಕ್ತಪಡಿಸಿದ್ದಾರೆ.

ಅಗ್ನಿಶಾಮಕ ಸಿಬ್ಬಂದಿಗಳ ವಿರುದ್ಧ ಸ್ಥಳೀಯರ ಆಕ್ರೋಶ ಹೆಚ್ಚಾಗಿದೆ. ಚಿಕ್ಕಮಗಳೂರು ನಗರದ ಹೊರ ವಲಯದಲ್ಲಿರುವ ಸಾಮಾಜಿಕ ಅರಣ್ಯದಲ್ಲಿ ಬೆಂಕಿ ಕಾಣಿಸಿಕೊಂಡಿದೆ.




Share this Story:

Follow Webdunia kannada

ಮುಂದಿನ ಸುದ್ದಿ

ಪಾಕ್ ಯುದ್ಧ ಸಾರಲು ಮುಂದಾದ್ರೆ ಪ್ರತ್ಯುತ್ತರ ಹಾಗೇ ಇರುತ್ತೆ ಎಂದ ಸಿದ್ದರಾಮಯ್ಯ!