ಆ ಹೋರಾಟಕ್ಕೆ ಚರ್ಚ್ ನ ಸಿಬ್ಬಂದಿ, ಮಸೀದಿಯ ಬಂಧುಗಳು ಅಲ್ಲದೇ ದೇವಸ್ಥಾನದ ಸಮಿತಿಯವರು ಸಾಥ್ ನೀಡಿ ಒಗ್ಗಟ್ಟಾಗಿ ಗಮನ ಸೆಳೆದಿದ್ದಾರೆ.
ಮಂಗಳೂರು -ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75 ರ ಅಸಮರ್ಪಕ ಕಾಮಗಾರಿ ಹಿನ್ನೆಲೆ ನೆಲ್ಯಾಡಿಯಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.
ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿಯಿಂದ ರಸ್ತೆ ತಡೆ ಹಾಗೂ ಪ್ರತಿಭಟನೆಗೆ ಕರೆ ಕೊಡಲಾಗಿತ್ತು.
25 ಕ್ಕೂ ಹೆಚ್ಚು ವಿವಿಧ ಸಂಘ - ಸಂಸ್ಥೆಗಳು, ಶಾಲಾ- ಕಾಲೇಜು, ಚರ್ಚ್ ಸಿಬ್ಬಂದಿ, ಮಸೀದಿಯ ಬಂಧುಗಳು ಹಾಗೂ ದೇವಸ್ಥಾನ ಸಮಿತಿಯವರು ಬೆಂಬಲ ನೀಡಿದ್ರು.
ಸಾವಿರಾರು ಸಂಖ್ಯೆಯಲ್ಲಿ ಸೇರಿದ ಜನರು, ರಾಷ್ಟ್ರೀಯ ಹೆದ್ದಾರಿ 75 ರ ಅಸಮರ್ಪಕ ಕಾಮಗಾರಿ ನಡೆದಿರೋದಕ್ಕೆ ಆಕ್ರೊಶ ವ್ಯಕ್ತಪಡಿಸಿದ್ರು.
ಉಪ್ಪಿನಂಗಡಿ, ಪುತ್ತೂರು, ನೆಲ್ಯಾಡಿ ಪೊಲೀಸರಿಂದ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿತ್ತು.