ಚಾಮರಾಜನಗರ : ಮಾರಮ್ಮನ ವಿಷ ಪ್ರಸಾದ ದುರಂತ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ನಾಗರ ದೇವಸ್ಥಾನದ ಅರ್ಚಕ ದೊಡ್ಡಯ್ಯ ನಿಂದ ಸ್ಪೋಟಕ ಮಾಹಿತಿ ಬಹಿರಂಗವಾಗಿದೆ.
ಎರಡು ದಿನಗಳ ಹಿಂದೆ ದೊಡ್ಡಯ್ಯ, ದೇವಸ್ಥಾನದ ವ್ಯವಸ್ಥಾಪಕ ಮಾದೇಶ್ ಹಾಗೂ ಆತನ ಪತ್ನಿ ಅಂಬಿಕಾ ಸೇರಿ ಹಲವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ವಿಚಾರಣೆ ವೇಳೆ ದೇವಸ್ಥಾನದ ಟ್ರಸ್ಟ್ ಅಧ್ಯಕ್ಷ ಇಮ್ಮಡಿ ಮಹದೇವಸ್ವಾಮಿ ಸೂಚನೆ ಮೇರೆಗೆ ಪ್ರಸಾದದಲ್ಲಿ ವಿಷ ಹಾಕಿದ್ದೇನೆ ಎಂದು ನಾಗರ ದೇವಸ್ಥಾನದ ಅರ್ಚಕ ದೊಡ್ಡಯ್ಯ ತಪ್ಪೊಪ್ಪಿಕೊಂಡಿದ್ದಾನೆ ಎಂಬುದಾಗಿ ತಿಳಿದುಬಂದಿದೆ.
ಈ ಬಗ್ಗೆ ಮಹದೇವಸ್ವಾಮಿ ಜೊತೆ ಚರ್ಚೆ ನಡೆಸಿದ ಅಂಬಿಕಾ, ಮಾದೇಶ್ ಅವರು ದೊಡ್ಡಯ್ಯನಿಗೆ ವಿಷ ಹಾಕಲು ಡೀಲ್ ಒಪ್ಪಿಸಿದ್ದು, ಅವರ ಆದೇಶದಂತೆ ದೊಡ್ಡಯ್ಯ ಪ್ರಸಾದದಲ್ಲಿ ವಿಷ ಬೆರೆಸಿದ್ದಾನೆ. ಆದರೆ ಸಿಕ್ಕಿ ಹಾಕಿಕೊಳ್ಳಬಾರದೆಂದು ದೊಡ್ಡಯ್ಯ ಆ ವೇಳೆ ತಾನು ಕೂಡ ಪ್ರಸಾದ ಸೇವಿಸಿ ಆಸ್ಪತ್ರೆಗೆ ದಾಖಲಾಗಿದ್ದ. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಪೊಲೀಸರು ಆತನನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಆಗ ದೊಡ್ಡಯ್ಯ ಸ್ಪೋಟಕ ಮಾಹಿತಿ ಬಹಿರಂಗಪಡಿಸಿದ್ದಾನೆ.
ಹಾಗೇ ಈ ಘಟನೆಯಲ್ಲಿ ತನ್ನ ಸ್ನೇಹಿತ ಮಾದರಾಜ್ ಕೈವಾಡವಿರುವುದಾಗಿ ತಿಳಿಸಿದ್ದಾನೆ. ಇವರಿಬ್ಬರು ಈ ಹಿಂದೆ ಗಾಂಜಾ ಕೇಸ್ ನಲ್ಲಿ ಬಂಧನವಾಗಿದ್ದರು ಎಂಬುದಾಗಿ ತಿಳಿದುಬಂದಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.