ಕೊಪ್ಪಳ: ವಿಚ್ಛೇದನ ಪಡೆದ ಮುಸ್ಲಿಂ ಮಹಿಳೆಯರು ಬಿಜೆಪಿಗೆ ಮತ ಹಾಕಿದ್ದಾರೆ. ಈ ಬಗ್ಗೆ ಅವರು ನನ್ನ ಬಳಿ ಹೇಳಿದ್ದಾರೆ ಎಂದು ಬಿಜೆಪಿ ಮುಖಂಡ ತಿಪ್ಪೇರುದ್ರಸ್ವಾಮಿ ಹೇಳಿಕೆ ನೀಡಿದ್ದಾರೆ.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಗಂಗಾವತಿಯಲ್ಲಿ ಬಹಳಷ್ಟು ಮುಸಲ್ಮಾನರು ನೋಟಾ ಚಲಾವಣೆ ಮಾಡಿದ್ದಾರೆ. ನಾಲ್ಕು ನಾಲ್ಕು ಹೆಂಡತಿಯರನ್ನ ಮಾಡಿಕೊಂಡ ಗಂಡಂದಿರ ನೋವು ತಾಳಲಾರದ ಮಹಿಳೆಯರು ಬಿಜೆಪಿಗೆ ಮತ ಹಾಕಿದ್ದಾರೆ. ಎಂದು ಹೇಳಿದ್ದಾರೆ.
ಮೊದಲೆಲ್ಲಾ ಮೂರು ಬಾರಿ ತಲಾಕ್ ಎಂದು ನಮ್ಮನ್ನು ತವರಿಗೆ ಕಳುಹಿಸಿ ಬಿಡುತ್ತಿದ್ದರು. ಆದ್ರೆ ಬಾಯಿಮಾತಿನಲ್ಲಿ ತಲಾಕ್ ಎಂದರೆ ಮಾನ್ಯತೆಯಿಲ್ಲ ಎಂಬ ಕಾನೂನು ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಂದಿದೆ. ಆದ್ದರಿಂದ ಪ್ರಧಾನಿ ನರೇಂದ್ರ ಮೋದಿ ನಮ್ಮಣ್ಣ ಎಂದು ಅವರಿಗೆ ಮತ ಹಾಕಿದ್ದೇವೆ ಎಂದು ಮುಸ್ಲಿಂ ಮಹಿಳೆಯರು ನನ್ನ ಬಳಿ ಹೇಳಿರುವುದಾಗಿ ಅವರು ತಿಳಿಸಿದ್ದಾರೆ.
ಮೋದಿ ಬಂದ ಮೇಲೆ ನಾವು ತಲೆ ಎತ್ತಿ ಬದುಕುತ್ತಿದ್ದೇವೆಂದು ಮುಸ್ಲಿಂ ಮಹಿಳೆಯರು ಬಿಜೆಪಿಗೆ ಬೆಂಬಲ ನೀಡಿದ್ದಾರೆ. ಎಷ್ಟೋ ವಿದ್ಯಾವಂತ ಮುಸ್ಲಿಂ ಮಹಿಳೆಯರು ಬಿಜೆಪಿ ಕಾರ್ಯವೈಖರಿಯನ್ನು ಮೆಚ್ಚಿ ನಮ್ಮ ಪಕ್ಷಕ್ಕೆ ಮತ ಹಾಕಿದ್ದಾರೆ ಎಂದು ಪ್ರಧಾನಿ ಮೋದಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.