ಬೆಂಗಳೂರು : ಕೆ.ಜಿ ಹಳ್ಳಿ, ಡಿಜಿ ಹಳ್ಳಿ ಗಲಭೆ ಕೇಸ್ ಗೆ ಸಂಬಂಧಿಸಿದಂತೆ NIA ಕಾಂಗ್ರೆಸ್ ಶಾಸಕರಾದ ಜಮೀರ್ ಅಹಮ್ಮದ್ ಹಾಗೂ ರಿಜ್ವಾನ್ ಅವರನ್ನು ವಿಚಾರಣೆ ನಡೆಸಿದೆ ಎಂಬುದಾಗಿ ಮೂಲಗಳಿಂದ ತಿಳಿದುಬಂದಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಶಾಸಕ ರಿಜ್ವಾನ್ ಅವರು, NIA ನೋಟಿಸ್ ನೀಡಿ ವಿಚಾರಣೆ ಮಾಡಿದ್ರು. ಜಮೀರ್, ನನ್ನನ್ನು ವಿಚಾರಣೆಗೆ ಕರೆದಿದ್ರು. ಘಟನೆ ಕುರಿತು ನಮ್ಮ ಹೇಳಿಕೆ ಪಡೆದಿದ್ದಾರೆ. ನಾವು ಹೋಗುವ ಮೊದಲೇ ಹಿಂಸಾಚಾರ ನಡೆದಿತ್ತು. ಘಟನಾ ಸ್ಥಳಕ್ಕೆ ನಾವು ಭೇಟಿ ನೀಡಿದ್ದೆವು. ಪೊಲೀಸ್ ಅಧಿಕಾರಿಗಳ ಜತೆಯೇ ಸ್ಥಳಕ್ಕೆ ಭೇಟಿ. ಘಟನೆ ಬಗ್ಗೆ NIA ಗೆ ಮಾಹಿತಿ ನೀಡಿದ್ದೇವೆ ಎಂದು ಹೇಳಿದ್ದಾರೆ.
ಹಾಗೇ ಘಟನೆ ಹಿಂದೆ ಕಾಂಗ್ರೆಸ್ ನಾಯಕರ ಕೈವಾಡ ಇಲ್ಲ. ಅಖಂಡ ಶ್ರೀನಿವಾಸ್ ಮೂರ್ತಿ ನನಗೆ ಆತ್ಮೀಯರು. ಶಾಸಕರ ಪ್ರಾಣಕ್ಕೆ ಹಾನಿ ಇರೋದು ಗೊತ್ತಿರಲಿಲ್ವಾ? ಘಟನೆ ತಡೆಯುವಲ್ಲಿ ಗುಪ್ತಚರ ಇಲಾಖೆ ವಿಫಲವಾಗಿದೆ. ಮತ್ತೆ ವಿಚಾರಣೆಗೆ ಕರೆದ್ರೆ ಹೋಗುತ್ತೇನೆ ಎಂದು ಅವರು ತಿಳಿಸಿದ್ದಾರೆ.