ಜೀವ ರಕ್ಷಕವಾಗಬೇಕಿದ್ದ ಅಂಬ್ಯುಲೆನ್ಸ್ ಯುವತಿಯೊಬ್ಬಳ ಜೀವವನ್ನು ಬಲಿಪಡೆದುಕೊಂಡಿದೆ.
ಚಿತ್ರದುರ್ಗದ ಸಿಂಗಪೂರ ಬಳಿ ಅಪಘಾತದಲ್ಲಿ ಪಲ್ಲವಿ (18) ಸಾವನ್ನಪ್ಪಿದ್ದಾರೆ.
ಮೃತಳ ಸಂಬಂಧಿಕರು ಹಾಗೂ ಶಾಲಾ ವಿಧ್ಯಾರ್ಥಿಗಳಿಂದ ಘಟನೆ ಖಂಡಿಸಿ ಪ್ರತಿಭಟನೆ ನಡೆದಿದೆ.
ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯಿಂದ ಪ್ರತಿಭಟನಾ ಮೆರವಣಿಗೆ ಶುರುವಾಗಿ ಡಿಸಿ ಕಚೇರಿಗೆ ತಲುಪಿತು.
ಕಂಪಳರಂಗ ಕಾಲೇಜು ವಿದ್ಯಾರ್ಥಿಗಳಿಂದ ಪ್ರತಿಭಟನೆ ನಡೆಯಿತು. ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯಾಗಿದ್ದ ಪಲ್ಲವಿಗೆ ಅಂಬ್ಯುಲೆನ್ಸ್ ಢಿಕ್ಕಿ ಹೊಡೆದ ಪರಿಣಾಮ ಸಾವನ್ನಪ್ಪಿದ್ದಾಳೆ.