ಬೆಂಗಳೂರು: ಕೆಲವೊಮ್ಮೆ ಫೇಸ್ ಬುಕ್ ಖಾತೆ ಹ್ಯಾಕ್ ಆಗಿ ನಿಮ್ಮ ಆತಂಕ ಹೆಚ್ಚಾಗುತ್ತದೆ. ನಿಮ್ಮ ಖಾಸಗಿತನ ದುರುಪಯೋಗವಾಗುವ ಭಯವಿರುತ್ತದೆ. ಒಂದು ವೇಳೆ ಫೇಸ್ ಬುಕ್ ಖಾತೆ ಹ್ಯಾಕ್ ಆದರೆ ಏನು ಮಾಡಬೇಕು? ಇಲ್ಲಿ ನೋಡಿ.
ಮೊದಲು ಪಾಸ್ ವರ್ಡ್ ಬದಲಾಯಿಸಿಕೊಳ್ಳಿ: ಸೆಟ್ಟಿಂಗ್ಸ್ ಮತ್ತು ಪ್ರೈವೆಸಿ ಪೇಜ್ ಗೆ ಹೋಗಿ ಪಾಸ್ ವರ್ಡ್ ಮತ್ತು ಸೆಕ್ಯುರಿಟಿ ಆಯ್ಕೆ ಒತ್ತಿ ಪಾಸ್ ವರ್ಡ್ ಬದಲಾಯಿಸಿಕೊಳ್ಳಿ.
ಬಳಿಕ ಅದೇ ಪೇಜ್ ನಲ್ಲಿ ಸಸ್ಪೀಷಿಯನ್ ಲಾಗ್ ಇನ್ ಕ್ಲಿಕ್ ಮಾಡಿ ಸೆಕ್ಯೂರ್ ಅಕೌಂಟ್ ಬಟನ್ ಒತ್ತಿ. ಬಳಿಕ ಫೇಸ್ ಬುಕ್ ಹೇಳುವಂತೆ ನಿಮ್ಮ ಖಾತೆ ಸುರಕ್ಷಿತಮಾಡಿಕೊಳ್ಳಿ. ಅಲ್ಲದೆ ಫೇಸ್ ಬುಕ್ ನ ಗೆಟ್ ಹೆಲ್ಪ್ ಆಯ್ಕೆ ಒತ್ತಿ ನಿಮ್ಮ ಖಾತೆ ಹ್ಯಾಕ್ ಆಗಿದೆ ಎಂದು ರಿಪೋರ್ಟ್ ಮಾಡಿಕೊಳ್ಳಬಹುದು.