ಪೆಟ್ರೋಲ್ ಬೆಲೆ ಏರಿಕೆಯ ವಿಚಾರದಲ್ಲಿ ಬಿಜೆಪಿ ನಾಯಕರ ವಿರೋಧಕ್ಕೆ ಉಡುಪಿಯಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ ಮಾಜಿ ಸಚಿವ ಪ್ರಮೋದ್ ಮದ್ವರಾಜ್ ತಿರುಗೇಟುನೀಡಿದ್ದಾರೆ.
ಉಡುಪಿಯ ಬಡಗಬೆಟ್ಟು ಕೋ ಅಪರೇಟಿವ್ ಸೊಸೈಟಿಯ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಬಡ ಶಾಲೆ ಮಕ್ಕಳಿಗೆ ಬಡಗ ಬೆಟ್ಟು ಕ್ರೆಡಿಟ್ ಕೋ ಅಪರೇಟಿವ್ ಸೊಸೈಟ್ವತಿಯಿಂದ ನೀಡಲಾದ ಸೈಕಲ್ ನ್ನು ವಿತರಿಸಿದ ಕಾಪು ಶಾಸಕ ಲಾಲಾಜಿಮೆಂಡನ್ ಮುಖ್ಯ ಅತಿಥಿಯಾಗಿ ಮಾತನಾಡಿದ್ರು, ಪೆಟ್ರೋಲ್ ಬೆಲೆ ದುಬಾರಿಯಾಗಿದೆ. ಹಾಗಾಗಿ ಸೈಕಲ್ಬಳಸುವುವ ಮೂಲಕ ಇಂಧನದ ಬೆಲೆ ಏರಿಕೆಯ ನಿಯಂತ್ರಣದ ಜೊತೆಗೆ ಪರಿಸರ ಮಾಲಿನ್ಯವನ್ನು ತಡೆಗಟ್ಟಬಹುದು ಎಂಬ ಹೇಳಿಕೆ ನೀಡಿದ್ದರು. ಶಾಸಕರ ಹೇಳಿಕೆಗೆ ಮಾಜಿ ಸಚಿವಪ್ರಮೋದ್ ಮದ್ವರಾಜ್ ಕಾರ್ಯಕ್ರಮದಲ್ಲಿಯೇ ಟಾಂಗ್ ನೀಡಿದ್ದಾರೆ. ಕಾಂಗ್ರೆಸ್ ಸರಕಾರದ ಆಡಳಿತ ಸಂದರ್ಭ ಪೆಟ್ರೋಲೆ ಬೆಲೆ ಏರಿಕೆಯಾದಾಗ ಬಿಜೆಪಿಗರು ಪ್ರತಿಭಟನೆನಡೆಸುತ್ತಾರೆ. ಆದೇ ತನ್ನ ಅಧಿಕಾರದ ಅವಧಿಯಲ್ಲಿ ಪೆಟ್ರೋಲ್ ಬೆಲೆ ಏರಿಕೆಯಾದಾಗ ಸೈಕಲ್ ಸವಾರಿ ಮಾಡಬೇಕು ಅಂತ ಹೇಳ್ತಾರೆ ಅಂತಾ ಲೇವಡಿ ಮಾಡಿದರು.