Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

3 ಡಿಸಿಎಂ ಬೇಕು ಎನ್ನುವುದರಲ್ಲಿ ತಪ್ಪೇನಿದೆ?

3 ಡಿಸಿಎಂ ಬೇಕು ಎನ್ನುವುದರಲ್ಲಿ ತಪ್ಪೇನಿದೆ?
bangalore , ಬುಧವಾರ, 20 ಸೆಪ್ಟಂಬರ್ 2023 (15:20 IST)
ಸಮುದಾಯವಾರು ಮೂರು ಡಿಸಿಎಂ ಆಗಬೇಕು ಅನ್ನೋ ವಿಚಾರದಲ್ಲಿ ತಪ್ಪೇನಿದೆ ಎಂದು ಸಹಕಾರ ಸಚಿವ
K.N.ರಾಜಣ್ಣ ಪುನರುಚ್ಚರಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಪಕ್ಷದ ಹಿತದೃಷ್ಟಿಯಿಂದ ಹೈಕಮಾಂಡ್ ಮುಂದೆ ಪ್ರಸ್ತಾಪ ಮಾಡಿದ್ದೇನೆ. ಅವರಿಗೆ ಸರಿ ಅನ್ಸಿದ್ರೆ ಮಾಡ್ತಾರೆ.. ಬೇಡ ಅಂದ್ರೆ ಬಿಡ್ತಾರೆ ಎಂದು ತಿಳಿಸಿದ್ರು. ಸಿಎಂ ಸಿದ್ದರಾಮಯ್ಯ ಈ ಮಾತನ್ನು ನನ್ನಿಂದ ಹೇಳಿಸ್ತಾ ಇದ್ದಾರೆ ಅನ್ನೋದು ತಪ್ಪು ಕಲ್ಷನೆ ಎಂದು ಸ್ಪಷ್ಟಪಡಿಸಿದ್ರು. ನಾನು ಈ ವಿಚಾರವಾಗಿ ಸಿದ್ದರಾಮಯ್ಯರನ್ನು ಭೇಟಿ ಮಾಡಿಯೇ ಇಲ್ಲ.. ಮೂರು ಡಿಸಿಎಂಗಳನ್ನು ಆಯ್ಕೆ ಮಾಡಿದ್ರೆ ಡಿಸಿಎಂ ಡಿ.ಕೆ.ಶಿವಕುಮಾರ್​ ಪ್ರಾಮುಖ್ಯತೆ ಕಡಿಮೆ ಆಗುತ್ತೆ ಎನ್ನುವುದು ತಪ್ಪು. ಈ ಲೋಕಸಭೆ ಚುನಾವಣೆ ಬಹಳ ಪ್ರಮುಖವಾದುದು.. ಅದರ ಗೆಲುವಿಗಾಗಿ ಈ ಸೂತ್ರ ಹೇಳಿದ್ದೇನೆಯೇ ಹೊರತು, ಬೇರೆ ಯಾವ ಉದ್ದೇಶ ಇಲ್ಲ ಎಂದು ಹೇಳಿದ್ರು. ಇವತ್ತಿನ ಚುನಾವಣಾ ವ್ಯವಸ್ಥೆ ನೋಡಿದಾಗ ಜಾತಿ ಬಹಳ ಪ್ರಾಮುಖ್ಯತೆ ವಹಿಸುತ್ತದೆ.. ಆದ್ದರಿಂದ ಸಮುದಾಯವಾರು ಮೂರು ಡಿಸಿಎಂ ಇದ್ರೆ ಒಳ್ಳೆಯದು ಎನ್ನುವುದು ನನ್ನ ಅಭಿಪ್ರಾಯ.. ಇನ್ನು ನನ್ನ ಹೇಳಿಕೆಯಿಂದ ನಾನು ದೂರ ಸರಿಯೋ ಮಾತಿಲ್ಲ. ಸಮುದಾಯವಾರು ಡಿಸಿಎಂ ಸ್ಥಾನ ನೀಡಬೇಕು ಎಂದು ಪ್ರತಿಪಾದಿಸಿದ್ರು.

ಡಿಸಿಎಂ ಹುದ್ದೆ ಕೊಡುವುದು ಸಿಎಂ ವಿವೇಚನೆಗೆ ಬಿಟ್ಟಿದ್ದು. ಜೊತೆಯಲ್ಲಿ ಹೈಕಮಾಂಡ್ ನಾಯಕರು ನಿರ್ಧಾರ ಕೈಗೊಳ್ಳಬೇಕು ಎಂದು ಸಚಿವ K.H.ಮುನಿಯಪ್ಪ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು,ಪ್ರಾದೇಶಿಕ ಕಾಂಗ್ರೆಸ್ ಅಧ್ಯಕ್ಷರು ಸೇರಿ ಡಿಸಿಎಂ ಬೇಕಾ ಎಂದು ಚರ್ಚಿಸಿ ನಿರ್ಧಾರ ಕೈಗೊಳ್ಳಬೇಕು.. ಹಲವಾರು ರಾಜ್ಯಗಳಲ್ಲಿಯೂ ಹೀಗೆ ಮಾಡಿದ್ದಾರೆ.. ಇಲ್ಲೂ ಕೂಡ ಒಬ್ಬ ಡಿಸಿಎಂ ಇದ್ದಾರೆ.. 3 ಡಿಸಿಎಂ ಮಾಡೋ ವಿಚಾರದಲ್ಲಿ ಹೈಕಮಾಂಡ್ ತೀರ್ಮಾನ ಮಾಡುತ್ತೆ ಎಂದು ತಿಳಿಸಿದ್ರು.

Share this Story:

Follow Webdunia kannada

ಮುಂದಿನ ಸುದ್ದಿ

ಕುಡಿಯುವ ನೀರಿಗಾಗಿ ಜೈಲಿಗೆ ಹೋಗೋಣ, ನಿಮ್ಮೊಂದಿಗೆ ನಾವಿದ್ದೇವೆ: ರಾಜ್ಯ ಸರ್ಕಾರಕ್ಕೆ ಮು.ಚಂದ್ರು ಕರೆ