Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಲಾಕ್ ಡೌನ್ ಉಲ್ಲಂಘಿಸಿ ರಾಮ ನವಮಿಗೆ ಹೂವು ಖರೀದಿಸಿದವರಿಗೆ ಏನಾಯ್ತು?

ಲಾಕ್ ಡೌನ್ ಉಲ್ಲಂಘಿಸಿ ರಾಮ ನವಮಿಗೆ  ಹೂವು ಖರೀದಿಸಿದವರಿಗೆ ಏನಾಯ್ತು?
ದಾವಣಗೆರೆ , ಗುರುವಾರ, 2 ಏಪ್ರಿಲ್ 2020 (19:06 IST)
ಕೊರೊನಾ ವೈರಸ್ ಹರಡದಂತೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಸಲುವಾಗಿ ಕೇಂದ್ರ ಸರ್ಕಾರ ವಿಧಿಸಿರುವ ಲಾಕ್ ಡೌನ್ ಅನ್ನು ಖುಲ್ಲಂ ಖುಲ್ಲಾ ಉಲ್ಲಂಘನೆ ಮಾಡಲಾಗಿದೆ.

ರಾಮನವಮಿ ಹಿನ್ನೆಲೆಯಲ್ಲಿ ದಾವಣಗೆರೆ ನಗರದ ಜನರು ಲಾಕ್ ಡೌನ್ ಉಲ್ಲಂಘಿಸಿ ಯಾವುದೇ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಮುಗಿಬಿದ್ದು ಹೂವು, ಹಣ್ಣು, ತರಕಾರಿ ಖರೀದಿಸಿದರು.

ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಬಳಿ  ಮುಂಜಾನೆಯೇ ಸೇರಿದ ಜನರು ಹೂವು, ಹಣ್ಣುಗಳನ್ನು ಖರೀದಿಸಿದರು.
ಬೈಕ್, ಕಾರುಗಳಲ್ಲಿ ಬಂದ ಜನರು ಪಿಬಿ ರಸ್ತೆಯಲ್ಲಿ ವಾಹನಗಳನ್ನು ನಿಲ್ಲಿಸಿ ಹೂವು ಮಾರುಕಟ್ಟೆಗೆ ಲಗ್ಗೆ ಇಟ್ಟರು. ಮುಂಜಾನೆ ಐದು ಗಂಟೆಯಿಂದ ಬೆಳಗ್ಗೆ 10 ಗಂಟೆಯವರೆಗೂ ಜನರು ಸಾಮೂಹಿಕವಾಗಿ  ಲಾಕ್ ಡೌನ್ ಉಲ್ಲಂಘಿಸಿದ್ದಾರೆ. ನಿರಾತಂಕವಾಗಿ ಹೂವು ಹಣ್ಣು ಖರೀದಿಸಿದರು.

ಈ ನಡುವೆ ಜಿಲ್ಲಾ ಪೊಲೀಸ್ ಇಲಾಖೆ ರಾಮನವಮಿಯನ್ನು ಮನೆಗಳಲ್ಲಿಯೇ ಆಚರಿಸಲು ಸೂಚನೆ ನೀಡಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಕೊರೊನಾ ಸೋಂಕಿತರಿಗೆ 150 ಜನರೊಂದಿಗೆ ಸಂಪರ್ಕ