ದೋಸ್ತಿ ಸರ್ಕಾರ ಬೆಳಗಾವಿಯಲ್ಲಿ ನಡೆಸುವ ಚಳಿಗಾಲ ಅಧಿವೇಶನಕ್ಕೆ ಕಬ್ಬು ಬೆಳೆಗಾರರ ಹೋರಾಟ ಮುಳುವಾಗಲಿದೆ.
ರೈತರಿಗೆ ಸಕ್ಕರೆ ಕಾರ್ಖಾನೆಗಳು ಮಾಡುತ್ತಿರುವ ಅನ್ಯಾಯ ಖಂಡಿಸಿ ರೈತರು ಬೆಳಗಾವಿ ಡಿಸಿ ಕಚೇರಿ ಎದುರು ಅಹೋರಾತ್ರಿ ಹೋರಾಟ ಆರಂಭಿಸಿದ್ದಾರೆ. ರೈತರ ಬೇಡಿಕೆ ಈಡೇರಿಸಲು ಸರ್ಕಾರಕ್ಕೆ ರೈತರು ಗಡುವು ನೀಡಿದ್ದಾರೆ.
ಸಕ್ಕರೆ ಕಾರ್ಖಾನೆ ಮಾಲೀಕರು ರೈತರಿಗೆ ಮಾಡುತ್ತಿರುವ ಮೋಸ ಖಂಡಿಸಿ ಇವತ್ತು ಮಧ್ಯಾಹ್ನ ದಿಂದ ಡಿಸಿ ಕಚೇರಿ ಎದುರು ಹೋರಾಟ ಆರಂಭಿಸಿದ್ದಾರೆ.
ಪ್ರತಿಭಟನಾ ಸ್ಥಳಕ್ಕೆ ಡಿಸಿ ಭೇಟಿ ನೀಡಿ ಹೋಗುವಾಗ ರೈತರು ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು. ಜೊತೆಗೆ ಡಿಸಿ ಭರವಸೆ ಬಳಿಕ ರೈತ ಮುಖಂಡರಾದ ಗಂಗಾಧರ, ಕುರುಬೂರ ಶಾಂತಕುಮಾರ, ಈರಣ್ಣಾ ಕಡಾಡಿ, ಅಶೋಕ ಪೂಜಾರಿ, ಸಿದ್ದಗೌಡ ಮೋದಗಿ, ಲಕ್ಕಣ್ಣ ಸಂಸುದ್ದಿ ನೇತೃತ್ವದಲ್ಲಿ ಸುಧೀರ್ಘ ಸಮಾಲೋಚನೆ ನಡೆಸಿ, ಪ್ರತಿಭಟನೆ ಮುಂದುವರೆಸುವ ನಿರ್ಧಾರ ತೆಗೆದುಕೊಂಡಿದ್ದಾರೆ.