ಬೆಂಗಳೂರು : ದಲಿತರ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ ಅವರಿಗೆ ಬಿಜೆಪಿ ನಾಯಕರು ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಸಿಎಂ ಮಾಡಿ ತೋರಿಸಿ ಎಂದು ಸವಾಲು ಹಾಕಿದ್ದರು.
ಈ ಬಗ್ಗೆ ಇದೀಗ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ಖರ್ಗೆಯನ್ನು ಸಿಎಂ ಮಾಡಬೇಡಿ ಎಂದು ಯಾರು ಹೇಳಿದ್ದಾರೆ. ನಾವು ಮಲ್ಲಿಕಾರ್ಜುನ ಖರ್ಗೆ ಸಿಎಂ ಆಗಲಿ ಎಂದು ಹೇಳ್ತೇವೆ. 2013ರಲ್ಲಿ ನನ್ನನ್ನು ಸಿಎಂ ಆಗಿ ಎಂದು ಹೈಕಮಾಂಡ್ ಆಯ್ಕೆ ಮಾಡಿದ್ದರು. ಆದ್ದರಿಂದ ಸಿಎಂ ಆದೆ. ಖರ್ಗೆ, ಪರಮೇಶ್ವರ್ ಸಿಎಂ ಆಗಬಾರದೆಂಬ ಪ್ರಶ್ನೆ ಇಲ್ಲ ಎಂದು ಹೇಳಿದ್ದಾರೆ.
ಇದೇ ವೇಳೆ ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಅಸಮಾಧಾನಗೊಂಡ ವಿಚಾರದ ಬಗ್ಗೆ ಮಾತನಾಡಿದ ಅವರು, ಸಂಪುಟ ವಿಸ್ತರಣೆಯ ವೇಳೆ ಅವರಿಗೆ ಅವಕಾಶ ಸಿಗುತ್ತದೆ. ಅವರ ಜೊತೆ ನಾನು ಮಾತನಾಡುತ್ತೇನೆ. ಸಚಿವ ಸ್ಥಾನ ಕೊಡುವುದಾಗಿ ನಾನೇ ಅವರಿಗೆ ಹೇಳಿದ್ದೆ. ಸಂಪುಟ ಪುನಾರಚನೆ ವೇಳೆ ಕೊಡುವುದಾಗಿ ಹೇಳಿದ್ದೆ. ಆದ್ರೆ ಈಗ ಸಂಪುಟದಲ್ಲಿ ಸಿ.ಎಸ್.ಶಿವಳ್ಳಿ ಮೃತಪಟ್ಟಿದ್ದರಿಂದ ತೆರನಾದ ಒಂದೇ ಒಂದು ಸಚಿವ ಸ್ಥಾನವಿದೆ. ಈಗ ಆ ಒಂದು ಸಚಿವ ಸ್ಥಾನ ಮಾತ್ರ ಭರ್ತಿ ಮಾಡ್ತಿದ್ದೇವೆ. ಕಾಂಗ್ರೆಸ್ ನಲ್ಲಿ ಮೂಲ, ವಲಸಿಗ ಪ್ರಶ್ನೆಯೇ ಬರುವುದಿಲ್ಲ ಎಂದು ತಿಳಿಸಿದ್ದಾರೆ.