ಹಾಸನ : ಶಾಸಕರು ರಾಜೀನಾಮೆ ನೀಡಲು ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಅವರೇ ಕಾರಣ ಎಂಬ ಮಾತು ಕೇಳಿಬಂದಿದೆ. ಈ ಬಗ್ಗೆ ಇದೀಗ ಜೆಡಿಎಸ್ ಶಾಸಕ ಎ.ಟಿ.ರಾಮಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.
ಹಳ್ಳಿ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜೀನಾಮೆಗೆ ರೇವಣ್ಣ ಕಾರಣ ಎಂದು ಶಾಸಕರು ಹೇಳಲಿ. ನಾನೇ ರೇವಣ್ಣನ ಕೈಯಿಂದ ರಾಜೀನಾಮೆಕೊಡಿಸುತ್ತೇನೆ ಎಂದು ಹೇಳಿದ್ದಾರೆ.
ಬಿಜೆಪಿಗೆ ಹೋಗುವುದಕ್ಕೆ ಅವರು ರಾಜೀನಾಮೆ ನೀಡಿದ್ದಾರೆ, ಮೈತ್ರಿಯಲ್ಲಿ ಹೊಂದಾಣಿಕೆ ಇಲ್ಲವೆಂದು ಮೊದಲೇ ಹೇಳಿದ್ದೆ. ಸಮಸ್ವಯತೆ ಇಲ್ಲದಿದ್ರೆ ವಿಪಕ್ಷದಲ್ಲಿ ಕೂರೋಣ ಎಂದಿದ್ದೆ. ಈ ವಿಷಯವನ್ನು ನಮ್ಮ ನಾಯಕರಿಗೆ ಮೊದಲೇ ತಿಳಿಸಿದ್ದೆ. ರೇವಣ್ಣ ಹೆಚ್ಚು ಸ್ಪೀಡ್, ಹೆಚ್ಚು ಸ್ಪೀಡಾದಾಗ ಹೀಗೆ ಆಗುತ್ತೆ.ರಾಜಕೀಯದಲ್ಲಿ ಹೊಗಳು ಭಟ್ಟರು ಬಹಳ ಅಪಾಯಕಾರಿ ಎಂದು ಅವರು ತಿಳಿಸಿದ್ದಾರೆ.