ಮಹಾತ್ಮಾ ಗಾಂಧೀಜಿಯವರ 150ನೇ ಜನ್ಮ ವರ್ಷಾಚರಣೆ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಹಮ್ಮಿಕೊಂಡ ಸ್ತಬ್ದ ಚಿತ್ರವು ಕಲಬುರಗಿ ಜಿಲ್ಲೆಯ ಸೇಡಂ, ಚಿಂಚೋಳಿ ನಗರಗಳಿಗೆ ಆಗಮಿಸಿರು.
ಸೇಡಂ ತಹಶೀಲ್ದಾರರಾದ ಸಿದ್ದಣ್ಣ ಎಂ. ಜಮಖಂಡಿ ಅವರು ಗಾಂಧೀಜಿಯವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಸೇಡಂ ಪುರಸಭೆಯ ಮುಖ್ಯಾಧಿಕಾರಿ ಶರಣಯ್ಯಸ್ವಾಮಿ, ಮತ್ತಿತರ ಗಣ್ಯರು ಹಾಗೂ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು. ಗಾಂಧೀಜಿ ಅವರ ಜೀವನದ ವಿವಿಧ ಘಟನಾವಳಿಗಳು, ಸ್ವಾತಂತ್ರ್ಯ ಹೋರಾಟದ ಪ್ರತಿಕೃತಿಗಳಿಂದ ಸ್ತಬ್ದ ಚಿತ್ರವು ಎಲ್ಲರ ಗಮನ ಸೆಳೆಯಿತು.
ಚಿಂಚೋಳಿಯಲ್ಲಿ ಗಾಂಧಿ ಸ್ತಬ್ಚ ಚಿತ್ರಕ್ಕೆ ಸ್ವಾಗತ: ಗಾಂಧೀಜಿ ಸ್ತಬ್ದ ಚಿತ್ರವು ಚಿಂಚೋಳಿ ನಗರಕ್ಕೆ ಆಗಮಿಸಿದಾಗ ಚಿಂಚೋಳಿ ತಾಲೂಕು ಪಂಚಾಯಿತಿ ಅಧ್ಯಕ್ಷೆ ರೇಣುಕಾ ಅಶೋಕ ಚವ್ಹಾಣ, ಉಪಾಧ್ಯಕ್ಷೆ ರುದ್ರಶೆಟ್ಟಿ ಪಡಶೆಟ್ಟಿ ಹಾಗೂ ತಹಶೀಲ್ದಾರ ಪಂಡಿತ ಬಿರಾದಾರ ಅವರು ಗಾಂಧೀಜಿಯವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಕಂದಾಯ ನಿರೀಕ್ಷಕ ಕೇಶವ ಹಾಗೂ ಗಣ್ಯರಾದ ಅನೀಲ ದೇವೇಂದ್ರಪ್ಪ, ಚಿರಂಜಿವಿ ಹಾಗೂ ಸೇರಿದಂತೆ ಮತ್ತಿತರ ಗಣ್ಯರು ಹಾಗೂ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು. ನಂತರ ಈ ಸ್ತಬ್ದ ಚಿತ್ರ ವಾಹನವು ಚಿಂಚೋಳಿಯಿಂದ ಬೀದರ ಜಿಲ್ಲೆಯ ಹುಮನಾಬಾದಿಗೆ ತೆರಳಿತು.