ಬೆಂಗಳೂರು: ಹಿಂದುಳಿದ ವರ್ಗಗಳ ಉದ್ಯೋಗಿಗಳಿಗೆ ಬಡ್ತಿಯಲ್ಲಿ ಮೀಸಲಾತಿ ನೀಡುವುದು ಸರಿಯಲ್ಲ ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿದ ಬೆನ್ನಲ್ಲೇ ಅವರು ಒಪ್ಪದಿದ್ದರೆ ಮೇಲ್ಮನವಿ ಸಲ್ಲಿಸುತ್ತೇವೆ ಎಂದು ಸಚಿವ ಆಂಜನೇಯ ತಿಳಿಸಿದ್ದಾರೆ.
ಸುಪ್ರೀಂ ಕೋರ್ಟ್ ಆದೇಶದಿಂದಾಗಿ ಕರ್ನಾಟಕ ಸರಕಾರ ಈವರೆಗೆ ಕೊಡಮಾಡುತ್ತಿದ್ದ ಮೀಸಲಾತಿ ಆಧಾರಿತ ಬಡ್ತಿ ರದ್ದಾಗಲಿದೆ. ಇದು ಸರಿಯಲ್ಲ ಎನ್ನುವುದು ಸಚಿವರ ಅಭಿಪ್ರಾಯ. ಇದರಿಂದ ಸರ್ಕಾರದ ಸುಮಾರು ಇಲಾಖೆಗಳಲ್ಲಿರುವ ನೂರಾರು ನೌಕರರಿಗೆ ತೊಂದರೆಯಾಗಲಿದೆ.
ಹಿಂದುಳಿದ ವರ್ಗದವರಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಆಂಜನೇಯ ಹೇಳಿದ್ದಾರೆ. ಆದರೆ ಈ ತೀರ್ಪಿನಿಂದ ಈಗಾಗಲೇ ಈ ಸೌಲಭ್ಯ ಪಡೆದವರಿಗೆ ಯಾವುದೇ ತೊಂದರೆಯಿಲ್ಲ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ