Webdunia - Bharat's app for daily news and videos

Install App

ನೋಟು ನಿಷೇಧ 4 ತಿಂಗಳ ಹಿಂದೆ ತಿಳಿದಿತ್ತು ಎಂದ ಬಿಜೆಪಿ ಮುಖಂಡ: ದೂರು ದಾಖಲು

Webdunia
ಮಂಗಳವಾರ, 22 ನವೆಂಬರ್ 2016 (14:34 IST)
ಕಪ್ಪು ಹಣ ತಡೆಗಟ್ಟಲು ಹಳೆಯ ನೋಟುಗಳನ್ನು ರದ್ದು ಮಾಡಿ ಹೊಸ 2000 ಮುಖಬೆಲೆಯ ನೋಟುಗಳು ಬರುತ್ತವೆ ಎಂದು 4 ತಿಂಗಳ ಹಿಂದೆಯೇ ತಿಳಿದಿತ್ತು ಎಂಬ ಮಾಹಿತಿಯನ್ನು ನೀಡಿರುವ ಹೇಳಿಕೆಯ ಕುರಿತು ತನಿಖೆ ನಡೆಸಬೇಕೆಂದು ಮಾಜಿ ಸಚಿವ ಎಸ್.ಎ.ರಾಮದಾಸ್ ವಿರುದ್ಧ ದೂರು ದಾಖಲಾಗಿದೆ.
 
ದೇಶಾದ್ಯಂತ ನೋಟು ಬ್ಯಾನ್ ಮಾಡಿದ ಬೆನ್ನಲ್ಲೆ 500, 1000 ಮುಖಬೆಲೆಯ ನೋಟುಗಳನ್ನು ರದ್ದು ಮಾಡಿ 2000 ಮುಖಬೆಲೆಯ ಹೊಸ ನೋಟುಗಳು ಬರುತ್ತವೆ ಎನ್ನುವ ವಿಚಾರ 4 ತಿಂಗಳ ಹಿಂದೆಯೇ ತಿಳಿದಿತ್ತು ಎಂದು ಹೇಳಿಕೆ ನೀಡಿದ್ದ ಮಾಜಿ ಸಚಿವರ ವಿರುದ್ಧ ಎಸ್ಎಸ್‌ಯುಐ ಸಂಘಟನೆ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ದೂರು ದಾಖಲಿಸಿದೆ. 
 
ನೋಟು ಬ್ಯಾನ್ ವಿಷಯಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವರಿಗೆ ಮಾಹಿತಿ ನೀಡಿದ ಆರ್‌ಬಿಐ ಅಧಿಕಾರಿ ಯಾರು ಎನ್ನುವ ಕುರಿತು ತನಿಖೆ ನಡೆಸಬೇಕೆಂದು ಎಸ್ಎಸ್‌ಯುಐ ಸಂಘಟನೆ ಆಗ್ರಹಿಸಿದೆ. 
 
500, 1000 ಮುಖಬೆಲೆಯ ನೋಟುಗಳು ಬ್ಯಾನ್ ಆಗಿ 2000 ಮುಖಬೆಲೆಯ ನೋಟುಗಳು ಬರುತ್ತವೆ ಎಂದು ನಾನೇ ಮೊದಲು ಹೇಳಿಕೆ ನೀಡಿಲ್ಲ. ಮಾಧ್ಯಮಗಳು ನನ್ನ ಹೇಳಿಕೆಯನ್ನು ತಿರುಚಿ ಪ್ರಸಾರ ಮಾಡಿದ್ದು, ಈ ಕುರಿತು ನಾನು ಯಾವುದೇ ತನಿಖೆಗೆ ಸಿದ್ಧ ಎಂದು ಮಾಜಿ ಸಚಿವ ರಾಮದಾಸ್ ಸ್ಪಷ್ಟಪಡಿಸಿದ್ದಾರೆ. 
 
ನನ್ನ ವಿರುದ್ಧ ರಾಜಕೀಯ ಷಡ್ಯಂತ್ರ ನಡೆಯುತ್ತಿದ್ದು, ನನ್ನನ್ನು ಏಕವಚನದಲ್ಲಿ ನಿಂದಿಸಲಾಗಿದೆ ಎಂದು ತಮ್ಮ ಕಾರ್ಯಕರ್ತರ ಮೂಲಕ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಪ್ರತಿದೂರು ದಾಖಲಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments