Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ನಮ್ಮ ಬಳಿ ನೀರಿಲ್ಲ, ನೀರು ಬಿಡುವುದಿಲ್ಲ: ವಾಟಾಳ್ ನಾಗರಾಜ್ ಖಡಕ್ ನುಡಿ

ನಮ್ಮ ಬಳಿ ನೀರಿಲ್ಲ, ನೀರು ಬಿಡುವುದಿಲ್ಲ: ವಾಟಾಳ್ ನಾಗರಾಜ್ ಖಡಕ್ ನುಡಿ
ಬೆಂಗಳೂರು , ಮಂಗಳವಾರ, 27 ಸೆಪ್ಟಂಬರ್ 2016 (19:14 IST)
ಕಾವೇರಿ ನದಿಯಿಂದ ತಮಿಳುನಾಡಿಗೆ ನೀರು ಬಿಡುವಂತೆ ಮತ್ತೆ ಸುಪ್ರೀಂಕೋರ್ಟ್ ಆದೇಶ ನೀಡಿರುವ ಹಿನ್ನೆಲೆಯಲ್ಲಿ ನಮ್ಮ ಬಳಿ ನೀರಿಲ್ಲ, ನೀರು ಬಿಡುವುದಿಲ್ಲ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಖಡಕ್ ಹೇಳಿಕೆ ನೀಡಿದ್ದಾರೆ.
 
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾವೇರಿ ಜಲಾಶಯದಲ್ಲಿ ನೀರೆ ಇಲ್ಲ. ತಮಿಳುನಾಡಿಗೆ ನೀರು ಎಲ್ಲಿಂದ ಬಿಡುವುದು ಎಂದು ಪ್ರಶ್ನಿಸಿದರು. ಕಾವೇರಿ ನದಿಯಿಂದ ನೀರು ಬಿಡಲು ಸಾಧ್ಯವಿಲ್ಲ ಎಂದು ಸರಕಾರ ಕೈಗೊಂಡಿರುವ ನಿರ್ಧಾರಕ್ಕೆ ನಮ್ಮ ಬೆಂಬಲವಿದೆ ಎಂದರು.
 
ಜಲಾನಯನ ಪ್ರದೇಶದ ವಾಸ್ತವ ಸ್ಥಿತಿ ಅರಿಯಲು ಸುಪ್ರೀಂಕೋರ್ಟ್ ಸಮಿತಿ ರಚನೆ ಮಾಡಲಿ. ಕಾವೇರಿ ಜಲಾನಯನ ಪ್ರದೇಶದ ವಾಸ್ತವ ಸ್ಥಿತಿ ನೋಡಿ ಸುಪ್ರೀಂಕೋರ್ಟ್ ತೀರ್ಪು ನೀಡಲಿ ಎಂದು ಆಗ್ರಹಿಸಿದರು. 
 
ಕಾವೇರಿ ಸಂಬಂಧ ಉಭಯ ರಾಜ್ಯಗಳ ಮಧ್ಯ ಆಕ್ರೋಶ ಭುಗಿಲೆಳುತ್ತಿದೆ. ಈಗಲಾದ್ರೂ ಪ್ರಧಾನಿ ನರೇಂದ್ರ ಮೋದಿ ಮಧ್ಯಸ್ಥಿಕೆ ವಹಿಸಿ ವಿವಾದವನ್ನು ಇತ್ಯರ್ಥಗೊಳಿಸಲಿ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಒತ್ತಾಯಿಸಿದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

'ಕಾವೇರಿ'ದ ಸಂಕಟ: ನಾಳೆ ಮತ್ತೆ ಸರ್ವಪಕ್ಷ ಸಭೆ....