ಬಿಜೆಪಿ ದುರಾಡಳಿತ ವಿರುದ್ದ ಆರೋಪ ಪಟ್ಟಿ ಬಿಡುಗಡೆ ಮಾಡಿದ್ದೇವೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.ಬಿಜೆಪಿ ಪಾಪದ ಪುರಣ ಅಂತ ನಾಮಕರಣ ಮಾಡಿದ್ದೇವೆ.ಬಿಜೆಪಿಸರ್ಕಾರ ಅನೈತಿಕ ಮಾರ್ಗದಿಂದ ರಚನೆಯಾಗಿದೆ.ಜನರು ಈ ಸರ್ಕಾರಕ್ಕೆ ಆಶೀರ್ವಾದ ಮಾಡಿರಲಿಲ್ಲ.ಆಪ್ತರು ಕಮಲದಿಂದ ಸರ್ಕಾರ ರಾಜ್ಯಕ್ಕೆ ಒಕ್ಕರಿಸಿದೆ.ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಶಾಸಕರ ಖರೀದಿ ಮಾಡ್ತು.ಭ್ರಷ್ಟಾಚಾರ ಹಣ ಶಾಸಕರ ಖರೀದಿಗೆ ಬಳಸ್ತು.ಅದರಿಂದ ಭ್ರಷ್ಟಾಚಾರದಲ್ಲಿ ಬಿಜೆಪಿ ಸರ್ಕಾರ ಮುಳುಗಿಹೋಗಿದೆ.ಕರೋನ ರೋಗ ಬಂದಾಗ ಕೂಡ ಮೂರು ಸಾವಿರ ಕೋಟಿ ಭ್ರಷ್ಟಾಚಾರ ಮಾಡಿದ್ರು.ಅಧಿವೇಶನದಲ್ಲಿ ನಾವು ದಾಖಲೆ ಸಮೇತ ಪ್ರಸ್ತಾಪ ಮಾಡಿದ್ವಿ.ಮೂರುವರೆ ಲಕ್ಷ ಜನರು ಕರೋನಾಕ್ಕೆ ಸತ್ರುಸರಿಯಾದ ಪರಿಹಾರ ಸರ್ಕಾರ ನೀಡಲಿಲ್ಲ.ರಾಜ್ಯ ಕಂಡ ಅತ್ಯಂತ ದುರ್ಬಲ ಸಿಎಂ ಅಂದ್ರೆ ಬಸವರಾಜ ಬೊಮ್ಮಾಯಿ ಬಹಳ ಜವಾಬ್ದಾರಿಯಿಂದ ಈ ಮಾತುಹೇಳುತ್ತಿದ್ದೇನೆ
೧೫ ನೇ ಹಣಕಾಸು ಆಯೋಗದಿಂದ ಐದು ಸಾವಿರ ಕೋಟಿಬರಬೇಕು.ನಿರ್ಮಲಾ ಸೀತಾರಾಮನ್ ಪತ್ರ ಬರೆದು ಹೇಳಿದ್ದಾರೆ.ಹಣ ಕೊಡಲು ಆಗಲ್ಲ ಎಂದು೨೫ ಸಂಸದರು ಇದ್ರುಪ್ರಧಾನಿ ಮೇಲೆ ಒತ್ತಡ ಹಾಕಲಿಲ್ಲ.ಯಾರು ಕೂಡ ಕೇಂದ್ರದ ಮೇಲೆ ಒತ್ತಡ ಹಾಕಲಿಲ್ಲ.ನಮ್ಮ ತೆರಿಗೆ ಪಾಲು ೧.೭ ಬರಬೇಕಿತ್ತು.ವಿಶೇಷ ಅನುಧಾನ ಅಂತ ನಮಗೆ ಹಣ ಬರಬೇಕಿತ್ತು ಬಿಜೆಪಿ ಹೇಡಿತನದಿಂದ ರಾಜ್ಯಕ್ಕೆ ಅನ್ಯಾಯ ಆಯ್ತು.ಕೇಂದ್ರದಿಂದ ನಮ್ಮ ತೆರಿಗೆ ಪಾಲು ಕಡಿಮೆಯಾಗಿದೆ.೩.೫ ಲಕ್ಷ ಕೋಟಿ ನಮ್ಮಿಂದ ತೆರಿಗೆ ಸಂಗ್ರಹ ಆಗುತ್ತೆ.ಬೇರೆ ರಾಜ್ಯಗಳಿಗೆ ಹೋಲಿಸಿದ್ರೆ ಅತ್ಯಂತ ಕಡಿಮೆ ಹಣ ಕೊಡ್ತಾ ಇದ್ದಾರೆ ಎಂದು ಸಿದ್ದರಾಮಯ್ಯ ಬಿಜೆಪಿ ವಿರೋಧಿ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.