2013-14ರಲ್ಲಿ ನಾವು ನೀಡಿದ್ದ ಆದ್ಯತೆಗಳು ಮುಂದುವರಿದಿವೆ. ಕೃಷಿ, ಶಿಕ್ಷಣ, ಆರೋಗ್ಯ, ಮಹಿಳೆ ಮತ್ತು ಮಕ್ಕಳ ಕಲ್ಯಾಣ, ನೀರಾವರಿ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಆದ್ಯತೆ ಮುಂದುವರಿದಿವೆ. ಹೆಚ್ಚು ಹಣವನ್ನು ಖರ್ಚು ಮಾಡುತ್ತಿದ್ದೇವೆ ಎಂದು ಸಿಎಂ ಸಿದ್ತಿದರಾಮಯ್ಳಿಯ ತಿಳಿಸಿದ್ದಾರೆ.
ವಿಧಾನಸೌಧದ ಸಭಾಂಗಣದಲ್ಲಿ ಬಜೆಟ್ ಮಂಡನೆಯ ನಂತರ ಸುದ್ದಿಗೋಷ್ಠಿ ನಡೆಸಿದ ಅವರು, 2008-09ರ ಅವಧಿಯಲ್ಲಿ ಹಿಂದಿನ ಸರಕಾರ ಮಾಡಿದ ಖರ್ಚು ನಾವು ಮಾಡಿದ ಖರ್ಚಿನಲ್ಲಿ ಅಜಗಜಾಂತರ ವ್ಯತ್ಯಾಸವಿದೆ. ಅಗತ್ಯವಾದಲ್ಲಿ ಅಂಕಿ ಅಂಶಗಳನ್ನು ನೀಡುತ್ತೇನೆ. ಆದರೆ, ನೀವು ಪ್ರಕಟಿಸುತ್ತಿರೋ ಇಲ್ಲ ಗೊತ್ತಿಲ್ಲ ಎಂದರು.
ನಮ್ಮ ಸರಕಾರ ಬಂದ ಮೇಲೆ ಐದನೇ ಬಜೆಟ್ ಮಂಡಿಸಿದ್ದೇನೆ. ಕಳೆದ ವರ್ಷಕ್ಕಿಂತ ಈ ಬಾರಿ ಬಂಡವಾಳ ವೆಚ್ಚ ಶೇ.2 ರಷ್ಟು ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ.
ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಪ್ರಸಕ್ತ ವರ್ಷದ ಬಜೆಟ್ ಗಾತ್ರದಲ್ಲಿ 23142 ಕೋಟಿ ರೂ ಹೆಚ್ಚಳವಾಗಿದೆ. ವಿತ್ತಿಯ ಹೊಣೆಗಾರಿಕೆ ಕಳೆದ ವರ್ಷ ಜಾರಿಯಾಗಿದೆ, ರೆವಿನ್ಯೂ ಸರ್‌ಪ್ಲಸ್ ಇರಬೇಕು. ವಿತ್ತೀಯ ಕೊರತೆ ಶೇ.3ಕ್ಕಿಂತ ಕಡಿಮೆಯಿರಬೇಕು. ಸಾಲ ಜಿಡಿಪಿಯ ಶೇ.25ಕ್ಕಿಂತ ಕಡಿಮೆಯಿರಬೇಕು. ಹೀಗಾಗಿ ನಾವು ಮೂರು ಮಾನದಂಡಗಳನ್ನು ಪಾಲಿಸಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.
ನಾವು ಅಧಿಕಾರಕ್ಕೆ ಬಂದಾಗ ನೀರಾವರಿಗೆ 50 ಸಾವಿರ ಕೋಟಿ ವೆಚ್ಚ ಮಾಡಲಾಗುವುದು ಎಂದು ಭರವಸೆ ನೀಡಿದ್ದೇವು. ಅದರಂತೆ 53, 893 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ. ಒಟ್ಟು ನೀರಾವರಿಗಾಗಿ 62 ಸಾವಿರ ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ. ಬಿಜೆಪಿಯವರು ಕೇವಲ 21 ಸಾವಿರ ಕೋಟಿ ರೂ. ವೆಚ್ಚ ಮಾಡಿದ್ದರು ಎಂದು ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.