ಇಂದು ಸರ್ಕಾರಿ ನೌಕರರು ಮುಷ್ಕರ ನಡೆಸುತ್ತಿರುವ ಹಿನ್ನೆಲೆ ಸಿಎಂ ಬಸವರಾಜ್ ಬೊಮ್ಮಾಯಿ ಪ್ರತಿಕ್ರಿಯಿಸಿದ್ದು,ನಿನ್ನೆ ನೌಕರರ ಜತೆ ಚರ್ಚೆ ಆದ್ಮೇಲೆ ಹಣಕಾಸು ಇಲಾಖೆ ಅಧಿಕಾರಿಗಳ ಜೊತೆ ಮಾತಾಡಿದೆ.ಒಂದು ಒಪ್ಪಂದಕ್ಕೆ ಬಂದಿದ್ದೇವೆ.17% ಹೆಚ್ಚಳಕ್ಕೆ ಒಪ್ಪಿಗೆ ಸೂಚಿಸಿದೇವೆ.ಎನ್ ಪಿಎಸ್ ರದ್ದು ಬಗ್ಗೆ ಸಮಿತಿ ರಚನೆ, ಬಳಿಕ ನಿರ್ಣಯ ತೆಗೆದುಕೊಳ್ಳುತ್ತೇವೆ.
ಸರ್ಕಾರದಿಂಸ ಮಹತ್ವದ ನಿರ್ಣಯ ತೆಗೆದುಕೊಳ್ಳಲಾಗುತ್ತೆ.ಸರ್ಕಾರಿ ನೌಕರರಿಗೆ 17% ವೇತನ ಹೆಚ್ಚಳಕ್ಕೆ ನಿರ್ಧಾರ ಮಾಡಲಾಗಿದೆ.ನೌಕರರು ಮುಷ್ಕರ ಕೈಬಿಡ್ತಾರೆ ಎಂಬ ವಿಶ್ಚಾಸ ಇದೆ.NPS - ಬೇರೆ ರಾಜ್ಯಗಳಲ್ಲಿ ಏನ್ ಆಗಿದೆ ಎಂದು ವರದಿ ತರೆಸಿಕೊಳ್ಳುತ್ತೇವೆ.ACS ನೇತೃತ್ವದಲ್ಲಿ ಸಮಿತಿ ಮಾಡಿ ಎರಡು ತಿಂಗಳಲ್ಲಿ ವರದಿ ತರೆಸಿಕೊಳ್ಳುತ್ತೇವೆ.ಎನ್‌ಪಿಎಸ್ ರದ್ದು ಮಾಡುವ ಬೇಡಿಕೆ ಪರಾಮರ್ಶೆ ಮಾಡ್ತೇವೆ.ಎಸಿಎಸ್ ನೇತೃತ್ವದಲ್ಲಿ ಸಮಿತಿ ರಚಿಸ್ತೇವೆ.ಬೇರೆ ರಾಜ್ಯಗಳಲ್ಲಿ ಯಾವ ರೀತಿ ಪರಿಸ್ಥಿತಿ ಇದೆ ಅಂತ ಅಧ್ಯಯನ ನಡೆಸಿ ವರದಿ ಕೊಡಲು ಸೂಚಿಸ್ತೇವೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.