ಉಡುಪಿ : ಮಂಗಳೂರಿನಲ್ಲಿ ಡ್ರಗ್ಸ್ ಸೇವನೆ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇದೀಗ ಶೈಕ್ಷಣಿಕ ಹಬ್ ಆಗಿರುವ ಉಡುಪಿ ಜಿಲ್ಲೆಯಲ್ಲಿಯೂ ಡ್ರಗ್ಸ್ ಸೇವನೆ ವಿರುದ್ಧ ಪೊಲೀಸರು ಸಮರ ಸಾರಿದ್ದಾರೆ.
ಮಣಿಪಾಲದಲ್ಲಿ ಮಾದಕ ವ್ಯಸನಿ ಪ್ರಕರಣಗಳು ಹೆಚ್ಚಾಗಿದ್ದು, ಈ ಸಂಬಂಧ ಮಾಹೆ ವಿವಿಯ 42 ವಿದ್ಯಾರ್ಥಿಗಳನ್ನು ಅಮಾನತು ಮಾಡಲಾಗಿದೆ. ಈ ವಿದ್ಯಾರ್ಥಿಗಳನ್ನು ಒಂದು ತಿಂಗಳ ಅವಧಿಗೆ ಅಮಾನತು ಮಾಡಿ ಮಾಹೆ ವಿವಿ ಆದೇಶ ಹೊರಡಿಸಿದೆ.
ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ದಿಟ್ಟ ನಿರ್ಧಾರದ ಬಗ್ಗೆ ಮಾಹೆ ವಿವಿಯು ಆದೇಶ ಹೊರಡಿಸಿದ್ದು, ಆದೇಶ ಪತ್ರದಲ್ಲಿ ಅಮಾನತಗೆ ಕಾರಣಗಳನ್ನು ತಿಳಿಸಿದೆ. ಸಹಜ ಜೀವನ ನಡೆಸುವ ಉದ್ದೇಶದಲ್ಲಿ ಈ ಆದೇಶವನ್ನು ಹೊರಡಿಸಿದ್ದೇವೆ.
ಆರೊಗ್ಯಕರ ವಾತಾವರಣ ಸೃಷ್ಟಿಸಲು ನಾವು ಬದ್ಧರಾಗಿದ್ದೇವೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಪೊಲೀಸ್ ಮತ್ತು ಮಾಹೆ ವಿವಿಯ ಆಂತರಿಕ ತನಿಖೆಯಿಂದ ಮಾದಕ ವ್ಯಸನಿ ಪ್ರಕರಣ ಕಂಡುಬಂದಿದ್ದು,ವಿದ್ಯಾರ್ಥಿಗಳು ಇದನ್ನು ಸೇವನೆ ಮಾಡುವುದನ್ನು ಸಹಿಸಲ್ಲ. ಜೀರೋ ಟಾಲರೆನ್ಸ್ ಇಂತಹ ಪ್ರಕರಣ ಮುಂದುವರೆಯಬಾರದು ಹೇಳಿದೆ.